ಕಾಸರಗೋಡು: ಚಿನ್ಮಯ ವಿದ್ಯಾಲಯ ಕಾಸರಗೋಡಿನಲ್ಲಿ ಮಾತೃ ಪೂಜೆ ಆಚರಣೆ ವಿಜೃಂಭಣೆಯಿಂದ ನಡೆಯಿತು. ಪರಮ ಪಾವನವಾದ ನವರಾತ್ರಿ ದಿನಗಳಲ್ಲಿ ದೇವಿಯನ್ನು ವಿವಿಧ ರೂಪದಲ್ಲಿ ಆರಾಧಿಸಲಾಗುತ್ತಿದೆ. ಚಿನ್ಮಯ ಮಿxನ್ ಆವಿಷ್ಕರಿಸಿದ ಒಂದು ನವೀನ ಪದ್ಧತಿ ಮಾತೃ ಪೂಜೆ. ಪ್ರತಿಯೊಬ್ಬ ಅಮ್ಮಂದಿರೂ ಶಕ್ತಿ ಸ್ವರೂಪಿಣಿಯಾಗಿ ತಮ್ಮ ಮಕ್ಕಳನ್ನು ದೇಶದ ಒಳಿತಿಗಾಗಿ ಪ್ರಾಪ್ತರನ್ನಾಗಿ ಮಾಡಬೇಕೆಂದು ಸ್ವಾಗತ ಭಾಷಣದಲ್ಲಿ ಬ್ರಹ್ಮಚಾರಣಿ ದಿಶಾ ಚೈತನ್ಯ ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಸುನಿಲ್ ಕುಮಾರ್ ಕೆ.ಸಿ,ಮುಖ್ಯೋಪಾಧ್ಯಾಯನೀಯರಾದ ಪೂರ್ಣಿಮಾ ಎಸ್. ಆರ್, ಸಿಂಧೂ ಶಶಿಂದ್ರನ್, ಕಾಸರಗೋಡು ಚಿನ್ಮಯ ಮಿಷನ್ ಘಟಕದ ಕಾರ್ಯದರ್ಶಿ ಕೆ.ಬಾಲಚಂದ್ರನ್, ಅಧ್ಯಾಪಕ ವೃಂದದವರು, ಅಧ್ಯಾಪಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.