HEALTH TIPS

ಬಟ್ಟೆ ರಿಟರ್ನ್​ ಮಾಡಿಕೊಳ್ಳದೇ ಗ್ರಾಹಕಿಯನ್ನು ಆಟವಾಡಿಸುತ್ತಿದ್ದ ಕಂಪನಿಗೆ ಶಾಕ್​ ಕೊಟ್ಟ ಕೋರ್ಟ್​! ಬಿತ್ತು ಭಾರಿ ದಂಡ

 ಕೊಚ್ಚಿ: ಆನ್​ಲೈನ್​ನಲ್ಲಿ ಖರೀದಿಸಿದ ( Online Shopping ) ಬಟ್ಟೆಯನ್ನು ವಾಪಸ್ ಮಾಡಿಕೊಳ್ಳದ ಕಂಪನಿಗೆ ಎರ್ನಾಕುಲಂ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ನ್ಯಾಯಾಲಯ ದಂಡ ವಿಧಿಸಿದೆ. ಪ್ರಾಡಕ್ಟ್​ ಬೆಲೆ, ಪರಿಹಾರ ಮತ್ತು ನ್ಯಾಯಾಲಯದ ವೆಚ್ಚ ಸೇರಿದಂತೆ ಒಟ್ಟು 9,395 ರೂ.ಗಳನ್ನು ಪಾವತಿಸಲು ಕೋರ್ಟ್ ( Court )​ ಆದೇಶಿಸಿದೆ.

ಕೇರಳದ ಆಲಪ್ಪುಳದಲ್ಲಿರುವ ಇಹಾ ಡಿಸೈನ್ಸ್ ಬ್ರೈಡಲ್ ಸ್ಟುಡಿಯೋ ವಿರುದ್ಧ ಎಡಪ್ಪಲ್ಲಿ ಮೂಲದ ಕೆ.ಜಿ. ಲಿಸಾ ಅವರು ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ದೂರು ಸಲ್ಲಿಸಿದ ಲಿಸಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1,395 ರೂ.ಗಳನ್ನು ಪಾವತಿಸಿ ಹೊಲಿದ ಚೂಡಿದಾರ್‌ ಅನ್ನು ಆರ್ಡರ್ ಮಾಡಿದ್ದರು. ಆರ್ಡರ್ ಮಾಡಿದ ತಕ್ಷಣ ಪ್ರಾಡಕ್ಟ್​ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಲು ಮನವಿ ಮಾಡಲಾಯಿತು. ಆದರೆ, ಬಣ್ಣ ಬದಲಾವಣೆ ಸಾಧ್ಯವಿಲ್ಲ ಎಂದು ಕಂಪನಿ ತಿಳಿಸಿದೆ. ಹೀಗಾಗಿ ಲಿಸಾ ಅವರು ತನ್ನ ಆರ್ಡರ್​ ಅನ್ನು ರದ್ದುಗೊಳಿಸಲು ಪ್ರಯತ್ನಿಸಿದರು. ಆದರೆ, ಕಂಪನಿ ಅದನ್ನು ನಿರಾಕರಿಸಿತು.

ಇನ್ನು ಪಾವತಿಸಿದ ಮೊತ್ತವನ್ನು ಬೇರೆ ಆರ್ಡರ್​ಗೆ ಜಮಾ ಮಾಡಿಕೊಳ್ಳಲು ಮನವಿ ಮಾಡಲಾಯಿತು. ಆದರೆ, ಕಂಪನಿ ಅದನ್ನೂ ತಿರಸ್ಕರಿಸಿತು. ಈಗಾಗಲೇ ನಿಮ್ಮ ಪ್ರಾಡಕ್ಟ್​ ಅನ್ನು ಅಂಚೆ ಮೂಲಕ ಕಳುಹಿಸಲಾಗಿದೆ ಎಂದು ಕಂಪನಿ ತಿಳಿಸಿತು. ಆರ್ಡರ್​ ಡೆಲಿವರಿ ಪಡೆದು ಬಾಕ್ಸ್​ ಓಪನ್​ ಮಾಡಿ ಚೂಡಿದಾರ್ ನೋಡಿದಾಗ ಅದು ಉತ್ತಮ ಗುಣಮಟ್ಟದಾಗಿರಲಿಲ್ಲ. ಹೀಗಾಗಿ ಲಿಸಾ ಅವರು ಪ್ರಾಡಕ್ಟ್​ ಹಿಂದಿರುಗಿಸಲು ಪ್ರಯತ್ನಿಸಿದರು. ಆದರೆ, ಅದನ್ನು ಕಂಪನಿ ಒಪ್ಪಲಿಲ್ಲ. ಇದಾದ ಬಳಿಕ ಲಿಸಾ ಗ್ರಾಹಕ ನ್ಯಾಯಾಲಯವನ್ನು ಸಂಪರ್ಕಿಸಿದರು.


ಮಾರಾಟ ಮಾಡಿದ ಪ್ರಾಡಕ್ಟ್​ ಅನ್ನು ವಿನಿಮಯ ಮಾಡಿಕೊಳ್ಳದಿರುವ ಅಥವಾ ಹಿಂತೆಗೆದುಕೊಳ್ಳದಿರುವ ಧೋರಣೆಯು ಅನೈತಿಕ ವ್ಯಾಪಾರ ಪದ್ಧತಿಯಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಲ್ಲದೆ, ಕಂಪನಿಗೆ ದಂಡ ವಿಧಿಸಿದ ಕೋರ್ಟ್, 45 ದಿನಗಳೊಳಗೆ ದೂರುದಾರರಿಗೆ ಮೊತ್ತವನ್ನು ಪಾವತಿಸುವಂತೆ ಆದೇಶಿಸಿದೆ. ಗ್ರಾಹಕರ ಹಣದೊಂದಿಗೆ ಆಟವಾಡುವ ಕಂಪನಿಗಳಿಗೆ ಇದೊಂದು ಎಚ್ಚರಿಕೆಯ ಪಾಠವಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries