HEALTH TIPS

ಮೇಲು ಕೀಳೆಂಬ ಭಾವನೆಯಿಲ್ಲದೆ ಭಜಿಸುವ ಕೇಂದ್ರ ಮಂದಿರ - ಎಡನೀರು ಶ್ರೀ: ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದ ಶಿಲಾನ್ಯಾಸ ಸಭಾ ಕಾರ್ಯಕ್ರಮ

ಬದಿಯಡ್ಕ: 50ನೇ ವರ್ಷದಲ್ಲಿ ಮತ್ತೆ ಜೀರ್ಣೋದ್ಧಾರಗೊಂಡು ನೂತನಮಂದಿರವು ಭಕ್ತರ ಆರಾಧನೆಯ ಕೇಂದ್ರವಾಗಿ ಬೆಳಗಲಿ. ಮೇಲು ಕೀಳೆಂಬ ಭಾವನೆಯಿಲ್ಲದೆ ಭಜನಾ ಮಂದಿರದಲ್ಲಿ ಎಲ್ಲರೂ ಒಂದುಗೂಡಿ ದೇವರನ್ನು ಭಜಿಸುವ ಪರಿಪಾಠವನ್ನು ಹಿರಿಯರು ಹಾಕಿಕೊಟ್ಟಿದ್ದಾರೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.

ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಸಂಘದ ನೂತನ ಭಜನಾ ಮಂದಿರದ ಶಿಲಾನ್ಯಾಸ ಕಾರ್ಯಕ್ರಮವನ್ನು ಬುಧವಾರ ನೆರವೇರಿಸಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನವನ್ನು ನೀಡಿದರು.

ಕಲಿಯುಗದಲ್ಲಿ ಭಜನೆ, ನಾಮ ಸಂಕೀರ್ತನೆಗಳಿಗೆ ಅಪಾರವಾದ ಶಕ್ತಿಯಿದೆ. ದೇವರನ್ನು ಒಲಿಸಿಕೊಳ್ಳಲಿರುವ ಸುಲಭ ಮಾರ್ಗ ಭಜನೆ. ಧಾರ್ಮಿಕ ಕೇಂದ್ರಗಳು ಸಮಾಜದ ಎಲ್ಲಾ ಬಂಧುಗಳಿಗೂ ಒದಗಿಬರಬೇಕು. ಆ ನಿಟ್ಟಿನಲ್ಲಿ ಈ ಮಂದಿರವು ವಿಶಾಲವಾದ ಮನೋಭಾವದೊಂದಿಗೆ ಕಾರ್ಯಪ್ರವೃತ್ತಿಯಲ್ಲಿದೆ. ಮುಂದಿನ ದೀಪಾವಳಿಗೆ ಮೊದಲು ನೂತನ ಮಂದಿರವು ಬೆಳಗಲಿ ಎಂದರು.

ಉದ್ಯಮಿ ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಬದಿಯಡ್ಕ ದೀಪಬೆಳಗಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ತಂತ್ರಿವರ್ಯ ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ ಆಶೀರ್ವಚನವನ್ನು ನೀಡಿ, ಎಲ್ಲರನ್ನೂ ಒಂದುಗೂಡಿಸುವಂತಹ ಅಪಾರವಾದ ಶಕ್ತಿಯುಳ್ಳ ಸುಬ್ರಹ್ಮಣ್ಯ ದೇವರ ನೂತನ ಮಂದಿರವು ಹಿಂದೂ ಸಮಾಜದ ಶಕ್ತಿಕೇಂದ್ರವಾಗಲಿ. ಹಿಂದೂ ನಂಬಿಕೆಗಳು, ಆಚಾರಗಳ ಮೇಲೆ ನಡೆಯುತ್ತಿರುವ ಆಕ್ರಮಣಗಳನ್ನು ತಡೆಗಟ್ಟಬೇಕು. ದೈವೀ ಶಕ್ತಿಯು ನಮ್ಮಲ್ಲಿ ಪ್ರಬಲವಾಗಿರಬೇಕು ಎಂದರು.

ಜ್ಯೋತಿಷ್ಯರತ್ನ ಬೇಳ ಪದ್ಮನಾಭ ಶರ್ಮ ಇರಿಞÁ್ಞಲಕುಡ ಮಾತನಾಡಿ ಕುಮಾರಸ್ವಾಮಿಯ ಮಂದಿರಗಳು ಬಲು ವಿರಳ.  5 ದಶಕಗಳಿಂದ ನೀರ್ಚಾಲಿನಲ್ಲಿರುವ ಮಂದಿರದ ಬೆಳವಣಿಗೆ ಅಪಾರವಾಗಿದೆ. ಸನಾತನ ಧರ್ಮದ ವೈಶಿಷ್ಟ್ಯಗಳು ನಿತ್ಯಸತ್ಯದ ವಿಚಾರವಾಗಿದೆ. ಅದಕ್ಕೆ ಎಂದೂ ನಾಶವಿಲ್ಲ ಎಂದರು.

ಧಾರ್ಮಿಕ ಮುಂದಾಳು ಮಧುಸೂದನ ಆಯರ್ ಮಂಗಳೂರು ಮಾತನಾಡಿ ಹಿಂದೂಸಮಾಜದ ಮಾನಸಿಕ ಶ್ರೀಮಂತಿಕೆಯು ಧಾರ್ಮಿಕ ಕ್ಷೇತ್ರಗಳ ಪುನರುದ್ಧಾರಕ್ಕೆ ಕಾರಣವಾಗುತ್ತದೆ. ಕ್ಷೇತ್ರಗಳು ಹಾಗೂ ಆರಾಧನಾಲಯಗಳಲ್ಲಿ ಮುಂದಿನ ಜನಾಂಗಕ್ಕಾಗಿ ಧರ್ಮದ ಶಿಕ್ಷಣವನ್ನು ನೀಡಬೇಕು. ಹಿಂದುಗಳೆಲ್ಲರೂ ಒಂದೇ ಎಂಬ ಭಾವದೊಂದಿಗೆ ಒಂದುಗೂಡಿ ಭಗವಂತನ ನಾಮಪಜ ನಡೆದು ಸಮಾಜದ ಐಕ್ಯತೆಗೆ ಕಾರಣವಾಗಬೇಕು ಎಂದರು. 

ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಿ.ಸಿ.ಟ್ರಸ್ಟ್ ಕಾಸರಗೋಡು ಇದರ ಯೋಜನಾಧಿಕಾರಿ ಮುಖೇಶ್ ಮಾತನಾಡಿ ಭಜನಾ ಕ್ಷೇತ್ರವು ಇಂದು ಹಿಂದೂ ಸಮಾಜದಲ್ಲಿ ಬಲವಾಗಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಜನೆಗೆ ಪ್ರಾಧಾನ್ಯತೆಯನ್ನು ನೀಡುವ ಕಾಲಘಟ್ಟವಿದು ಎಂದರು.

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ವೇದಮೂರ್ತಿ ಶಿವಶಂಕರ ಭಟ್ ಕಿಳಿಂಗಾರು, ಮಂದಿರದ ಶಿಲ್ಪಿ ರಮೇಶ ಕಾರಂತ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಖಂಡಿಗೆ, ಕುಮಾರಸ್ವಾಮಿ ಭಜನಾ ಸಂಘದ ಅಧ್ಯಕ್ಷ ನಾರಾಯಣ ಶೆಟ್ಟಿ ಬೇಳ, ಮಂದಿರದ ಗುರುಸ್ವಾಮಿ ಸುಬ್ರಹ್ಮಣ್ಯ ಆಚಾರ್ಯ, ವ್ಯಾಪಾರಿ ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಗುರುಸ್ವಾಮಿಗಳಾದ ರಮೇಶ್ ಆಚಾರ್ಯ, ಕುಂಞÂಕಣ್ಣ, ಸಂಜೀವ ರೈ, ಜೀರ್ಣೋದ್ಧಾರ ಸಮಿತಿ ರಕ್ಷಾಧಿಕಾರಿ ಪರಮೇಶ್ವರ ಆಚಾರ್ಯ ನೀರ್ಚಾಲು, ಗೌರವ ಸಲಹೆಗಾರ ಮಾನ ಮಾಸ್ತರ್ ಮಾನ್ಯ, ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ ನಾರಾಯಣ ನಾಯ್ಕ ಮೈಕುರಿ, ಶಿವಾಜಿ ಫ್ರೆಂಡ್ಸ್‍ಕ್ಲಬ್ ಅಧ್ಯಕ್ಷ ಸಜಿತ್ ಕುಮಾರ್ ಬೇಳ, ಧರ್ಮಶಾಸ್ತಾ ಮಿತ್ರಮಂಡಳಿಯ ಅಧ್ಯಕ್ಷ ಚೋಮ ನಾಯ್ಕ ಮೈಕುರಿ, ಕುಮಾರಸ್ವಾಮಿ ಮಹಿಳಾ ಭಜನಾ ಸಂಘದ ಅಧ್ಯಕ್ಷೆ ಪದ್ಮಾವತಿ ಗಂಗಾಧರ ಪೂವಾಳೆ, ರತ್ನಗಿರಿ ಶ್ರೀ ಭಗವತಿ ಸೇವಾಸಮಿತಿಯ ಜಯರಾಮ ಪೊನ್ನಂಗಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಮಂಜುನಾಥ ಡಿ. ಮಾನ್ಯ ಪ್ರಾಸ್ತವಿಕ ಮಾತುಗಳನ್ನಾಡಿ ನಿರೂಪಿಸಿದರು.  ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರ ಮಾಸ್ತರ್ ನೀರ್ಚಾಲು ಸ್ವಾಗತಿಸಿ, ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ ನೀರ್ಚಾಲು ವಂದಿಸಿದರು. ಶ್ರೀಮಂದಿರದ ಜೊತೆಕಾರ್ಯದರ್ಶಿ ಗಣೇಶ್ ಕೆ.ನೀರ್ಚಾಲು ಪ್ರಾರ್ಥನೆ ಹಾಡಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries