ಕೊಚ್ಚಿ: ರಾಜ್ಯದ ರಸ್ತೆಗಳ ದುಃಸ್ಥಿತಿ ಹಾಗೂ ಕೊಚ್ಚಿಯಲ್ಲಿ ಅಕ್ರಮ ಜಾಹೀರಾತು ಫಲಕಗಳನ್ನು ತೆಗೆಯದ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಟೀಕೆ ಮಾಡಿದೆ.
ಪ್ರತಿಯೊಂದು ಜೀವವೂ ಅಮೂಲ್ಯ. ಅದು ರಸ್ತೆಯಲ್ಲಿ ಕೊನೆಯಾಗಬಾರದು. ಮಹಾ ಮಹಾನ್ ಗಳಾಗಿರುವ ಇಷ್ಟೊಂದು ಇಂಜಿನಿಯರ್‍ಗಳಿದ್ದರೂ ರಸ್ತೆಗಳು ಅತೀ ಶೋಚನೀಯ ಸ್ಥಿತಿಗೆ ತಲುಪಿದ್ದು ಹೇಗೆ ಎಂದೂ ಹೈಕೋರ್ಟ್ ಪ್ರಶ್ನಿಸಿದೆ.
ರಸ್ತೆಗಳ ಶೋಚನೀಯ ಸ್ಥಿತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಪರಿಗಣಿಸುವಾಗ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ನೇತೃತ್ವದ ಏಕ ಪೀಠ ಈ ಉಲ್ಲೇಖ ಕಟುಶಬ್ದಗಳಿಂದ ಮಾಡಿದೆ.
ಹೊಸದಾಗಿ ನಿರ್ಮಿಸಿರುವ ರಸ್ತೆಯಲ್ಲಿ ಗುಂಡಿಗಳು ಹೇಗೆ ನಿರ್ಮಾಣವಾಗಿವೆ ಎಂಬುದನ್ನು ಸ್ಪಷ್ಟ್ಟಪಡಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಕುನ್ನಂಕುಳಂ ರಸ್ತೆಯ ಸ್ಥಿತಿ ಹದಗೆಟ್ಟಿದೆ. ಎಲ್ಲಾದರೂ ರಸ್ತೆ ಕೆಟ್ಟಿರುವ ಬಗ್ಗೆ ಸೂಚನಾ ಫಲಕಗಳಿವೆಯೇ? ಹೆಲ್ಮೆಟ್ ಇಲ್ಲದ ಕಾರಣ ಮತ್ತು ಅತಿ ವೇಗದ ಚಾಲನೆಗಾಗಿ ದಂಡ ಮಾತ್ರ ವಿಧಿಸಲಾಗಿದೆ ಎಂದು ನ್ಯಾಯಾಲಯ ಗಮನಿಸಿದೆ.
ಕೇರಳದಲ್ಲಿ ಉತ್ತಮ ರಸ್ತೆಗಳಿಲ್ಲವೆಂದಲ್ಲ. ಆದರೆ ಹಾಳಾದ ರಸ್ತೆಗಳನ್ನು ದುರಸ್ತಿ ಮಾಡಲು ಅಧಿಕಾರಿಗಳು ಮುಂದಾಗದಿರುವ ಬಗ್ಗೆ ದೂರುಗಳು ಬಂದಿವೆ ಮತ್ತು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ನ್ಯಾಯಾಲಯವು ಎಚ್ಚರಿಕೆ ನೀಡಿದೆ. ಪ್ರಾಣ ರಕ್ಷಣೆ ಮಾಡುವವರು ಯಾರು ಎಂಬುದು ಶ್ರೀಸಾಮಾನ್ಯನ ಪ್ರಶ್ನೆ. ರಸ್ತೆಯಲ್ಲಿ ಅನೇಕ ಜೀವಗಳು ಬಲಿಯಾಗುತ್ತಿವೆ. ಪ್ರಪಂಚದಲ್ಲಿ ಭಾರತಕ್ಕಿಂತ ಹೆಚ್ಚು ಮಳೆ ಬೀಳುವ ಸ್ಥಳಗಳಿವೆ. ರಸ್ತೆಗಳು ಹಾನಿಯಾಗುತ್ತಿಲ್ಲ ಎಂದು ನ್ಯಾಯಾಲಯ ಬೊಟ್ಟುಮಾಡಿತು.
ರಸ್ತೆ ಅಪಘಾತದಲ್ಲಿ ಬಲಿಯಾದವರಿಗೆ ಏಕೆ ಪರಿಹಾರ ನೀಡುತ್ತಿಲ್ಲ ಎಂದು ನ್ಯಾಯಾಲಯ ಸರ್ಕಾರವನ್ನು ಪ್ರಶ್ನಿಸಿದೆ. ನಾವು ಹೊಸ ಕೇರಳವನ್ನು ಯಾವಾಗ ನೋಡುತ್ತೇವೆ ಮತ್ತು ರಸ್ತೆಗಳಲ್ಲಿ ಸಂಚರಿಸುವ ವಾಹನಗಳು ತೆರಿಗೆ ಪಾವತಿಸುವುದಿಲ್ಲವೇ ಎಂದು ನ್ಯಾಯಾಲಯ ಸರ್ಕಾರವನ್ನು ಕೇಳಿದೆ. ಹೈಕೋರ್ಟ್ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರ ವಾಹನ ಇತ್ತೀಚೆಗೆ ರಸ್ತೆ ಗುಂಡಿಗೆ ಬಿದ್ದು ಅಪಘಾತವಾಗಿತ್ತು.
ಕೊಚ್ಚಿಯಲ್ಲಿ ರಸ್ತೆಗಳ ಬಹುತೇಕ ಬದಿಗಳಲ್ಲಿ ಹಾಕಿರುವ ಅಕ್ರಮ ಬೋರ್ಡ್ ಗಳನ್ನು ತೆಗೆಯದಿದ್ದರೆ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವುದಾಗಿ ಹೈಕೋರ್ಟ್ ಎಚ್ಚರಿಕೆ ನೀಡಿದೆ. ಕೊಚ್ಚಿ ಪಾಲಿಕೆಯ ಕಾರ್ಯದರ್ಶಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದ್ದು, ರಾಜಕೀಯ ಪಕ್ಷಗಳ ಅಕ್ರಮ ಬೋರ್ಡ್ ತೆರವು ಮಾಡದಿರುವ ಬಗ್ಗೆ ಟೀಕೆ ವ್ಯಕ್ತವಾಗಿದೆ.