ಮೋಡದ (Clouds) ಮೇಲೊಂದು ಮನೆಯ ಮಾಡಬೇಕು ಎನ್ನುವ ಕನಸು ಇರುವವರು ಮಾತ್ರ ಈ ಹಳ್ಳಿಗೆ (Unique Village) ಹೋಗಬಹುದು. ಯಾಕೆಂದರೆ ಈ ಹಳ್ಳಿ ಇರುವುದೇ ಮೋಡಗಳ ಮೇಲೆ. ಇಲ್ಲಿನ ಮತ್ತೊಂದು ವೈಶಿಷ್ಟ್ಯವೆಂದರೆ ಮಳೆಯೇ ಬೀಳದ ಗ್ರಾಮವಿದು. ಕೇಳಿದರೆ ಅಚ್ಚರಿಯಾಗಬಹುದು.
ನಾವೆಲ್ಲ ವರ್ಷದಲ್ಲಿ ಎಷ್ಟು ಕಾಲ ಎಂದು ಯಾರಾದರೂ ಕೇಳಿದರೆ ಸುಲಭವಾಗಿ ಮೂರು ಕಾಲಗಳು. ಮಳೆಗಾಲ, ಬೇಸಿಗೆ ಕಾಲ, ಚಳಿಗಾಲ ಎಂದು ಹೇಳಿ ಬಿಡುತ್ತೇವೆ. ಆದರೆ ಈ ಗ್ರಾಮದ ಜನರಿಗೆ ಮಾತ್ರ ಮಳೆಗಾಲ ಎಂಬುದು ಇಲ್ಲವೇ ಇಲ್ಲ. ಹೀಗಾಗಿ ಈ ಗ್ರಾಮವನ್ನು ಮಳೆ ಇಲ್ಲದ ಗ್ರಾಮ ಎಂದು ಕರೆಯಲಾಗುತ್ತದೆ. ಯೆಮನ್‌ನ (Yemen) ರಾಜಧಾನಿ ಸಾನದಲ್ಲಿರುವ ಕೆಂಪು ಮರಳುಗಲ್ಲಿನ ಮೇಲೇರಿವ ಬೆಟ್ಟದ ಮೇಲಿದೆ ಈ ಗ್ರಾಮ. ಇವರೆಗೂ ಇಲ್ಲಿ ಮಳೆಯೇ ಬಿದ್ದಿಲ್ಲ. ಇದರ ಹಿಂದಿದೆ ಒಂದು ವಿಶೇಷ ಕಾರಣ.
ವಿಶ್ವದಲ್ಲೇ ಈವರೆಗೆ ಮಳೆಯನ್ನೇ ಕಾಣದ ಅಲ್-ಹುದೀಬ್ (Al-Hutaib village) ಹಳ್ಳಿ ನೆಲ ಮಟ್ಟದಿಂದ ಸುಮಾರು 3,200 ಅಡಿ ಎತ್ತರದಲ್ಲಿದೆ. ಇದುವೇ ಇಲ್ಲಿ ಮಳೆ ಬೀಳದೇ ಇರಲು ಪ್ರಮುಖ ಕಾರಣವಾಗಿದೆ. ಸಾಮಾನ್ಯವಾಗಿ ಮೋಡಗಳ ಕೆಳಗೆ ಮಳೆ ಬೀಳುತ್ತದೆ. ಆದರೆ ಈ ಗ್ರಾಮ ಮೋಡಗಳ ಮೇಲೆ ಇದೆ. ಇದು ಇಲ್ಲಿ ಮಳೆಯಾಗದೇ ಇರಲು ಇರುವ ಪ್ರಮುಖ ಕಾರಣ ಎಂದು ಪರಿಗಣಿಸಲಾಗಿದೆ. ಹಗಲಿನಲ್ಲಿ ತುಂಬಾ ಬಿಸಿಯಾಗಿರುವ ಈ ಹಳ್ಳಿ ರಾತ್ರಿ ವೇಳೆ ಸಾಕಷ್ಟು ತಂಪಾಗಿರುತ್ತದೆ.
ಪ್ರಪಂಚದ ಎಲ್ಲಾ ಪ್ರದೇಶಗಳಲ್ಲಿ ವರ್ಷದಲ್ಲಿ ಒಂದು ಬಾರಿಯಾದರೂ ಮಳೆ ಬಂದು ಹೋಗುತ್ತದೆ. ಆದರೆ ಇಲ್ಲಿ ಮಾತ್ರ ಯಾವತ್ತೂ ಮಳೆ ಬೀಳುವುದಿಲ್ಲ. ಸಾಮಾನ್ಯವಾಗಿ ಸೂರ್ಯನ ಬಿಸಿಲಿಗೆ ನೆಲದಿಂದ ಆವಿಯಾಗುವ ನೀರು ಭೂಮಿಯ ವಾತಾವರಣದಲ್ಲಿ ತಂಪಾಗಿ ಮೋಡಗಳಾಗುತ್ತವೆ. ಇದು ಭಾರವಾದಾಗ ಮಳೆಯ ರೂಪದಲ್ಲಿ ಭೂಮಿಗೆ ಬೀಳುತ್ತದೆ. ಆದರೆ ಮೋಡಗಳಿಗಿಂತಲೂ ಎತ್ತರದಲ್ಲಿರುವ ಅಲ್-ಹುದೀಬ್ ಗ್ರಾಮದಲ್ಲಿ ಮಳೆಯೇ ಇಲ್ಲ. ಹೀಗಾಗಿ ಸದಾ ಇಲ್ಲಿ ಬರಗಾಲವಿರುತ್ತದೆ. ಯಾವತ್ತೂ ಮಳೆ ಬೀಳದ ಕಾರಣ ಶುಷ್ಕ ವಾತಾವರಣವಿರುವ ಈ ಗ್ರಾಮದಲ್ಲಿ ಸೂರ್ಯ ಉದಯಿಸುತ್ತಿದ್ದಂತೆ ಬಿಸಿಯ ವಾತಾವರಣ ನಿರ್ಮಾಣವಾಗುತ್ತದೆ.
ಈ ಗ್ರಾಮದಲ್ಲಿ ಮಳೆಯೇ ಆಗದಿರಲು ಇನ್ನೊಂದು ಕಾರಣವೂ ಇದೆ. ಯಮನ್‌ನ ಈ ಭಾಗದಲ್ಲಿ ನೀರಿನ ಸಂಪನ್ಮೂಲ ವಿರಳವಾಗಿದೆ. ಅಲ್ಲದೇ ಈ ಗ್ರಾಮದಲ್ಲಿ ಮೋಡಗಳೇ ನಿರ್ಮಾಣವಾಗುವುದಿಲ್ಲ. ಸಾಮಾನ್ಯವಾಗಿ ಮಳೆಯ ಮೋಡಗಳು ಬಯಲು ಪ್ರದೇಶದ 2000 ಮೀಟರ್‌ಗಳ ಒಳಗೆ ಸಂಗ್ರಹಗೊಳ್ಳುತ್ತವೆ. ಆದರೆ ಅಲ್- ಹುದೀಬ್ ಗ್ರಾಮ ಸುಮಾರು 3,200 ಮೀಟರ್ ಎತ್ತರದಲ್ಲಿದೆ. ಹೀಗಾಗಿ ಇಲ್ಲಿ ಮಳೆಯೇ ಬೀಳುವುದಿಲ್ಲ.