ತಿರುವನಂತಪುರಂ: ಕಿರುಕುಳ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ ಮುಂದೆ ವಿಚಾರಣೆಗೆ ಹಾಜರಾಗಿದ್ದ ನಟ ಸಿದ್ದಿಕ್ ಅವರು ಕೋರಿದ ದಾಖಲೆಗಳನ್ನು ಹಾಜರುಪಡಿಸಲಿಲ್ಲ.
ದಾಖಲೆಗಳೊಂದಿಗೆ ಇದೇ ತಿಂಗಳ 12ರಂದು ಶನಿವಾರ ಮತ್ತೊಮ್ಮೆ ಹಾಜರಾಗುವಂತೆ ಸಿದ್ದಿಕ್‍ಗೆ ಸೂಚಿಸಲಾಗಿದೆ. ಸಿದ್ದಿಕ್ ಅವರು ತಮ್ಮ ಪುತ್ರನೊಂದಿಗೆ ತಿರುವನಂತಪುರಂ ಕಮಿಷನರ್ ಕಚೇರಿಗೆ ಹಾಜರಾಗಿದ್ದರು.
ಎರಡೂವರೆ ಗಂಟೆಗಳ ನಂತರ ಸಿದ್ದಿಕ್ ವಾಪಸಾದರು. ಆದರೆ ಯಾವುದೇ ವಿವರವಾದ ವಿಚಾರಣೆ ನಡೆದಿಲ್ಲ ಎಂದು ವಿಶೇಷ ತನಿಖಾ ತಂಡ ಹೇಳುತ್ತದೆ.
ಯುವತಿಯ ದೂರಿನ ಮೇರೆಗೆ ಸಿದ್ದಿಕ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಸಿನಿಮಾ ಚರ್ಚೆಗೆಂದು ಮ್ಯಾಸ್ಕಾಟ್ ಹೋಟೆಲ್ ಗೆ ಕರೆಸಿ ಬೀಗ ಹಾಕಿ ಕಿರುಕುಳ ನೀಡಿದ್ದಾರೆ ಎಂದು ಯುವ ನಟಿ ದೂರಿದ್ದಾರೆ. ದೂರುದಾರರ ಹೇಳಿಕೆಯನ್ನು ಪೋಲೀಸರು ದಾಖಲಿಸಿಕೊಂಡಿದ್ದಾರೆ.
ಹೈಸ್ಕೂಲ್ ಅವಧಿಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಭೇಟಿಯಾಗಿದ್ದ ಸಿದ್ದಿಕ್ ಅವರನ್ನು ನಿಲಾ ಥಿಯೇಟರ್‍ನಲ್ಲಿ ಚಿತ್ರವೊಂದರ ಪ್ರಿವ್ಯೂ ಶೋ ನಂತರ ಸಿನಿಮಾ ಚರ್ಚೆಗೆಂದು ಮ್ಯಾಸ್ಕಾಟ್ ಹೋಟೆಲ್‍ಗೆ ಆಹ್ವಾನಿಸಿದ್ದರು ಎಂದು ಹೇಳಲಾಗಿದೆ. ಈ ವೇಳೆ ಪೋಷಕರು ಜೊತೆಗಿದ್ದರು. ಬಳಿಕ ಹೊಟೇಲ್‍ಗೆ ಬಂದಾಗ ಕೊಠಡಿಗೆ ಬೀಗ ಹಾಕಿ ಕಿರುಕುಳ ನೀಡಿದ್ದಾರೆ. ಅಲ್ಲಿಂದ ಹೇಗೋ ಪರಾರಿಯಾಗಿರುವುದಾಗಿ ದೂರುದಾರರು ಹೇಳಿಕೆ ನೀಡಿದ್ದರು.
ಫಿiÀiರ್Áದಿದಾರರನ್ನು ತಿರುವನಂತಪುರದಲ್ಲಿ ನೋಡಿರುವುದಾಗಿ ಸ್ವತಃ ಸಿದ್ದಿಕ್ ಒಪ್ಪಿಕೊಂಡಿದ್ದಾರೆ. ನಟನ ಬಂಧನಕ್ಕೆ ಸುಪ್ರೀಂ ಕೋರ್ಟ್ ಎರಡು ವಾರಗಳ ತಡೆ ನೀಡಿತ್ತು. ಹೈಕೋರ್ಟ್ ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ಬಳಿಕ ತಲೆಮರೆಸಿಕೊಂಡಿದ್ದ ಸಿದ್ದಿಕ್ ಬಂಧನಕ್ಕೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದ ತರುವಾಯ ಹೊರ ಕಾಣಿಸಿಕೊಂಡರು.