ಕಣ್ಣೂರು: ಎಡಿಎಂ ನವೀನ್ ಬಾಬು ವಿರುದ್ಧ ಲಂಚದ ಆರೋಪ ಮಾಡಿದ್ದ ಪರಿಯಾರಂ ವೈದ್ಯಕೀಯ ಕಾಲೇಜು ನೌಕರ ಪ್ರಶಾಂತ್ ವಿರುದ್ಧ ವಿಜಿಲೆನ್ಸ್ ದೂರು ದಾಖಲಾಗಿದೆ.
ತಿಂಗಳಿಗೆ ಕೇವಲ 27 ಸಾವಿರ ಸಂಬಳ ಪಡೆಯುವ ಪ್ರಶಾಂತನ್ ಚೆಂಗಳಾಯಿಯಲ್ಲಿ ಪೆಟ್ರೋಲ್ ಪಂಪ್ ತೆರೆಯಲು 80 ಲಕ್ಷ ಖರ್ಚು ಮಾಡಿರುವುದು ಹೇಗೆಂದು ಆರೋಪಿಸಲಾಗಿದೆ.
ಪ್ರಶಾಂತ್ ವಿರುದ್ಧ ಕಣ್ಣೂರು ನಗರಪಾಲಿಕೆಯ ಮಾಜಿ ಮೇಯರ್ ಟಿ.ಒ.ಮೋಹನನ್ ವಿಜಿಲೆನ್ಸ್ ಗೆ ದೂರು ನೀಡಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
ಪೆಟ್ರೋಲ್ ಪಂಪ್‍ಗೆ ಅನುಮತಿ ನೀಡಲು ನವೀನ್ ಬಾಬು 1 ಲಕ್ಷ ರೂ. ಲಂಚ ಪಡೆದಿದ್ದಾರೆ ಎಂದು ಪ್ರಶಾಂತನ್ ಆರೋಪಿಸಿದ್ದರು. ಈ ವಿಷಯವಾಗಿ ಕಣ್ಣೂರು ಜಿಲ್ಲಾ ಮಾಜಿ ಪಂಚಾಯಿತಿ ಅಧ್ಯಕ್ಷೆ ಪಿ.ಪಿ.ದಿವ್ಯಾ ಅವರು ಎಡಿಎಂ ಅವರ ಬೀಳ್ಕೊಡುಗೆ ಕಾರ್ಯಕ್ಕೆ ಆಹ್ವಾನವಿಲ್ಲದೆ ಆಗಮಿಸಿ ನವೀನ್ ಬಾಬು ವಿರುದ್ದ ವೃಥಾ ಆರೋಪ ಮಾಡಿದ್ದರು,. ನಂತರ ನವೀನ್ ಬಾಬು ಆತ್ಮಹತ್ಯೆ ಮಾಡಿಕೊಂಡಿದ್ದರು.