HEALTH TIPS

ಜಿಲ್ಲೆಯ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಲಾಭದಾಯಕವಾಗಿಸಲು ಕ್ರಮ-ಶಾಸಕ ಸಿ.ಎಚ್ ಕುಞಂಬು

ಕಾಸರಗೋಡು : ಜಿಲ್ಲೆಯಲ್ಲಿ ಕೈಗಾರಿಕಾ ಇಲಾಖೆ ಅದಿನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಇಎಲ್ ಇಲೆಕ್ಟ್ರಿಕಲ್ಸ್ ಲಿಮಿಟೆಡ್ ಹಾಗೂ ಕೇರಳ ಟೆಕ್ಸ್ ಟೈಲ್ ಕಾಪೆರ್Çರೇಷನ್‍ನ ಉದುಮ ಟೆಕ್ಸ್ ಟೈಲ್ಸ್ ಘಟಕ ಲಾಭದಾಯಕವಾಗಿಸಲು ಕ್ರಮ ಕೈಗೊಳ್ಳುವ ಬಗ್ಗೆ  ಕೈಗಾರಿಕಾ ಸಚಿವ ಪಿ.ರಾಜೀವ್ ವಿಧಾನಸಭೆಗೆ ಮಾಹಿತಿ ನೀಡಿರುವುದಾಗಿ ಶಾಸಕ ಸಿ.ಎಚ್ ಕುಞಂಬು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕ ವಲಯದ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ತಾಂತ್ರಿಕ ಮತ್ತು ಮಾರುಕಟ್ಟೆ ಕ್ಷೇತ್ರಗಳು ಸೇರಿದಂತೆ ಉದ್ಯಮಕ್ಕೆ ಸಂಬಂಧಿಸಿದ ಎಲ್ಲಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಬೆಳವಣಿಗೆ ಮತ್ತು ಬದಲಾವಣೆಗಳು ಸೇರಿದಂತೆ, ಪ್ರತಿಸಂಸ್ಥೆಯ ಕಾರ್ಯಾಚರಣಾ ಕ್ಷೇತ್ರಕ್ಕೆ ಸೂಕ್ತ ನವೀಕರಣ ಮತ್ತು ವಿಸ್ತರಣೆ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. ದುಡಿಯುವ ಬಂಡವಾಳದ ನೆರವು ಸೇರಿದಂತೆ ಆರ್ಥಿಕ ಸಹಾಯವನ್ನೂ ಸರ್ಕಾರ ನೀಡುತ್ತಿದೆ. ಈ ಸಂಸ್ಥೆಗಳಪ್ರತಿ ಸಂಸ್ಥೆಯ 2024-25 ರ ಆರ್ಥಿಕ ವರ್ಷಕ್ಕೆ ವ್ಯಾಪಾರ ಯೋಜನೆ, ಎಂಒಯು ತಯಾರಿಕೆ ಮತ್ತು ಪ್ರಗತಿ ಬಗ್ಗೆ ಪ್ರತಿ ತಿಂಗಳು ಬೋರ್ಡ್ ಫಾರ್ ಪಬ್ಲಿಕ್ ಸೆಕ್ಟರ್ ಟ್ರಾನ್ಸ್‍ಫರ್ಮೇಷನ್ (ಬಿಪಿಟಿ)ಮಟ್ಟದಲ್ಲಿಯೂ ಪರಿಶೀಲನೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಲಾಗುತ್ತಿದೆ ಎಂದು ಸಿ.ಎಚ್ ಕುಞಂಬು ಅವರ ಪ್ರರ್ಶನೆಗೆ ಉತ್ತರಿಸಿ ಕೈಗಾರಿಕಾ ಇಲಾಖೆ ಸಚಿವರು ಮಾಹಿತಿ ನೀಡಿದ್ದಾರೆ. ಅಂತರ್ಜಾಲ ಆಧಾರಿತ ಮೇಲ್ವಿಚಾರಣಾ ವ್ಯವಸ್ಥೆಯ ಮೂಲಕ ಸಂಪೂರ್ಣ ಪರಿಶೀಲನೆ ನಡೆಸುವುದರ ಜತೆಗೆ  ನಿಯಮಿತ ಮಧ್ಯಂತರಗಳಲ್ಲಿ ಸರ್ಕಾರ ಮಟ್ಟದಲ್ಲಿಯೂ ಪರಿಶೀಲನೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿರುವುದಾಗಿ ಸಿ.ಎಚ್ ಕುಞಂಬು ಮಾಹಿತಿ ನೀಡಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries