HEALTH TIPS

ಚೀನಾದ ಬಿಆರ್‌ಐ ಯೋಜನೆ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿದ ಬ್ರೆಜಿಲ್‌

 ಬೀಜಿಂಗ್‌: ಚೀನಾದ ಮಹತ್ವಾಕಾಂಕ್ಷೆಯ 'ಬೆಲ್ಟ್‌ ಅಂಡ್‌ ರೋಡ್‌ ಇನಿಷಿಯೇಟಿವ್' (ಬಿಆರ್‌ಐ) ಯೋಜನೆ ಒಪ್ಪಂದಕ್ಕೆ ಬ್ರೆಜಿಲ್‌ ವಿರೋಧ ವ್ಯಕ್ತಪಡಿಸಿದೆ.

ಈ ಹಿಂದೆ ಬ್ರಿಕ್ಸ್‌ ಒಕ್ಕೂಟದಲ್ಲಿರುವ ಭಾರತ ಈ ಯೊಜನೆಗೆ ಕೈಜೋಡಿಸಲು ಹಿಂದೇಟು ಹಾಕಿತ್ತು. ಇದೀಗ ಬ್ರೆಜಿಲ್‌ ಕೂಡ ವಿರೋಧ ವ್ಯಕ್ತಪಡಿಸಿದ್ದು ಚೀನಾಕ್ಕೆ ಭಾರಿ ಹಿನ್ನಡೆಯಾಗಿದೆ.

'ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್‌ಗೆ ಬ್ರೆಜಿಲ್‌ ಕೈಜೋಡಿಸುತ್ತಿಲ್ಲ, ಬದಲಿಗೆ ಚೀನಾದ ಹೂಡಿಕೆದಾರರೊಂದಿಗೆ ಸಹಕರಿಸಲು ಬ್ರೆಜಿಲ್‌ ಪರ್ಯಾಯ ಮಾರ್ಗಗಳನ್ನು ಹುಡುಕಲಿದೆ' ಎಂದು ಬ್ರೆಜಿಲ್‌ ಅಧ್ಯಕ್ಷ ಲುಲಾ ಡ ಸಿಲ್ವಾ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸೆಲ್ಸೊ ಅಮೊರಿಮ್ ತಿಳಿಸಿದ್ದಾರೆ

'ಚೀನಾದೊಂದಿಗಿನ ನಮ್ಮ ಸಂಬಂಧವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಬಯಸುತ್ತೇವೇ ವಿನಃ ಈ ರೀತಿಯ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ. ಚೀನಾದ ಮೂಲಸೌಕರ್ಯ ಮತ್ತು ವ್ಯಾಪಾರ ಯೋಜನೆಗಳನ್ನು ವಿಮಾ ಪಾಲಿಸಿಗಳಂತೆ ತೆಗೆದುಕೊಳ್ಳಲು ಬ್ರೆಜಿಲ್ ಬಯಸುವುದಿಲ್ಲ' ಎಂದು ವಿವರಿಸಿದ್ದಾರೆ.

ಚೀನಾವನ್ನು ಯೂರೋಪ್‌ ಸೇರಿದಂತೆ ಹಲವಾರು ರಾಷ್ಟ್ರಗಳನ್ನು ಸಂಪರ್ಕಿಸುವ ಯೋಜನೆಯೇ ಈ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್.

ಭಾರತವೂ ವಿರೋಧಿಸಿತ್ತು

'ಭಾರತದ ಸಾರ್ವಭೌಮತೆ ಹಾಗೂ ಸಮಗ್ರತೆಯನ್ನು ನಿರ್ಲಕ್ಷಿಸಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಚೀನಾ ಮುಂದಾಗಿದೆ. ಹೀಗಾಗಿ, ಮೊದಲಿನಿಂದಲೂ ಭಾರತ ಈ ಯೋಜನೆಯನ್ನು ವಿರೋಧಿಸುತ್ತಾ ಬಂದಿದ್ದು, ಈ ನಿಲುವಿನಲ್ಲಿ‌ ಯಾವುದೇ ಬದಲಾವಣೆ ಇಲ್ಲ' ಎಂದು ಈ ಹಿಂದೆ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಹೇಳಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries