ಕಾಸರಗೋಡು: ಇತಿಹಾಸ ಪ್ರಸಿದ್ಧ ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಡಿ.16, 17, 18 ಮತ್ತು 19 ರಂದು ನಡೆಯುವ ಶ್ರೀ ಚಕ್ರಪೂಜೆ, ಕೋಟಿ ಪಂಚಾಕ್ಷರಿ ಜಪ ಯಜ್ಞ ಮತ್ತು ರುದ್ರ ಹೋಮ ಯಶಸ್ಸಿನ ಅಂಗವಾಗಿ ಕೋಟೆಕಣಿ ಪ್ರಾದೇಶಿಕ ಸಮಿತಿ ರೂಪಿಸಲಾಯಿತು.
ಕೋಟೆಕಣಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆದ ರೂಪೀಕರಣ ಸಭೆಯಲ್ಲಿ ಜಪ ಯಜ್ಞ ಸಮಿತಿ ಕಾರ್ಯಾಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಆರ್. ಜಪ ಯಜ್ಞದ ಕುರಿತಾದ ಮಾಹಿತಿ ನೀಡಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ವಿನಂತಿಸಿದರು. ಸಮಿತಿ ರಚನೆಯ ಬಳಿಕ ಆಮಂತ್ರಣ ಪತ್ರಿಕೆ ಹಾಗು ಕೂಪನ್‍ಗಳನ್ನು ಸಮಿತಿ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಸಮಿತಿ ರಚನೆ ಸಭೆಯಲ್ಲಿ ಕಾಸರಗೋಡು ನಗರಸಭಾ ಕೌನ್ಸಿಲರ್ ವರಪ್ರಸಾದ್ ಕೋಟೆಕಣಿ ಸ್ವಾಗತಿಸಿ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅರ್ಚಕ ಭಾಗ್ಯರಾಜ್ ವಂದಿಸಿದರು.