ಕುಂಬಳೆ: ದೇಲಂತೊಟ್ಟು ಬಜೆ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯುವ ವಿಶೇಷ ಕಾರ್ತಿಕ ದೀಪೋತ್ಸವ, ಸಾಮೂಹಿಕ ಶ್ರೀ ಸತ್ಯವಿನಾಯಕ ಪೂಜೆ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಭಾನುವಾರ ಶ್ರೀ ಕ್ಷೇತ್ರದಲ್ಲಿ ಶ್ರೀ ಮಾವಿಷ್ಣು ರಕ್ಷೇಶ್ವರಿ ದೈವ ಪರಿವಾರಗಳ ಸೇವಾ ಟ್ರಸ್ಟ್, ಶ್ರೀ ಮಹಾವಿಷ್ಣು ಸೇವಾ ಬಳಗ, ಶ್ರೀ ಮಹಾವಿಷ್ಣು ಮಹಿಳಾ ಸೇವಾ ಬಳಗ, ಶ್ರೀ ಮಹಾವಿಷ್ಣು ಭಜನಾ ಸಂಘ ಇದರ ಪದಾಧಿಕಾರಿಗಳು, ಸದಸ್ಯರು ಹಾಗೂ ಊರವರ ಉಪಸ್ಥಿತಿಯಲ್ಲಿ ನಡೆಯಿತು.