ಕಾಸರಗೋಡು: ಕೇರಳ ಹಾಗೂ ಕರ್ನಾಟಕದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೇಸು ದಾಖಲಾಗಿರುವ ವಾರಂಟ್ ಆರೋಪಿ, ಕಾರಾಟ್ ನೌಶದ್‍ನನ್ನು ಕಾಞಂಗಾಡು ಪೊಲೀಸ್ ಇನ್ಸ್‍ಪೆಕ್ಟರ್ ಅಜಿತ್ ಕುಮಾರ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಮಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ಈತ ಕಳವು ಕೃತ್ಯಕ್ಕಾಗಿ ಕಾಞಂಗಾಡಿಗೆ ಆಗಮಿಸಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.ರೈಲಿನಲ್ಲಿ ಕಾಞಂಗಾಡಿಗೆ ಬಂದಿಳಿದ ಈತನನ್ನು ಸೆರೆಹಿಡಿಯಲು ಪೊಲೀಸರು ತೆರಳುತ್ತಿದ್ದಂತೆ ಅಲ್ಲಿಂದ ಪರಾರಿಯಾಗಲೆತ್ನಿಸಿದ್ದಾನೆ. ತಕ್ಷಣ ಪೊಲೀಸರು ಹಿಂಬಾಲಿಸಿ ಸೆರೆ ಹಿಡಿಯುತ್ತಿದ್ದಂತೆ ಕೈಯಲ್ಲಿದ್ದ ಬ್ಲೇಡಿನಿಂದ ತನ್ನ ತುಟಿಗೆ ಗೀರಿಕೊಂಡು ಗಾಯಮಾಡಿಕೊಂಡಿದ್ದಾನೆ. ತನ್ನ ವಶದಲ್ಲಿ ಬ್ಲೇಡ್ ಇರಿಸಿಕೊಳ್ಳುತ್ತಿರುವ ಈತ, ತನ್ನನ್ನು ಎದುರಿಸುವವರಿಗೆ ಬ್ಲೇಡಿನಿಂದ ಗಾಯಗೊಳಿಸುವುದು ಈತನ ಹವ್ಯಾಸವಾಗಿದೆ. ನಿರಂತರ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗುತ್ತಿದ್ದ ಈತನನ್ನು ಶುಕ್ರವಾರ ಪೊಲೀಸರು ಅತ್ಯಂತ ಸಾಹಸದಿಂದ ಸೆರೆ ಹಿಡಿದಿದ್ದರೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಮಗ ಬಂಧನ ವಿಧಿಸಲಾಗಿದೆ.