ನವದೆಹಲಿ: 'ಗೆಲ್ಲಲೇಬೇಕು ಎಂದು ಪಣ ತೊಟ್ಟವರು ಎಂದೂ ದುರ್ಬಲರಾಗಬಾರದು. ಅವರು ಎಂದಿಗೂ ರಣರಂಗದಲ್ಲಿ ಸೆಣೆಸಾಡಲು ಸಿದ್ಧರಿರಬೇಕು ಎಂಬುದು ನನ್ನ ನಂಬಿಕೆ. ಸಾಕ್ಷಿ, ವಿನೇಶ್ ಹಾಗೂ ಭಜರಂಗ್ ಕಣದಲ್ಲಿರುವವರೆಗೂ ಹೋರಾಟ ದುರ್ಬಲವಾಗಿರದು' ಎಂದು ಶಾಸಕಿ ಹಾಗೂ ಕುಸ್ತಿಪಟು ವಿನೇಶ್ ಫೋಗಟ್ ಹೇಳಿದ್ದಾರೆ.
ನವದೆಹಲಿ: 'ಗೆಲ್ಲಲೇಬೇಕು ಎಂದು ಪಣ ತೊಟ್ಟವರು ಎಂದೂ ದುರ್ಬಲರಾಗಬಾರದು. ಅವರು ಎಂದಿಗೂ ರಣರಂಗದಲ್ಲಿ ಸೆಣೆಸಾಡಲು ಸಿದ್ಧರಿರಬೇಕು ಎಂಬುದು ನನ್ನ ನಂಬಿಕೆ. ಸಾಕ್ಷಿ, ವಿನೇಶ್ ಹಾಗೂ ಭಜರಂಗ್ ಕಣದಲ್ಲಿರುವವರೆಗೂ ಹೋರಾಟ ದುರ್ಬಲವಾಗಿರದು' ಎಂದು ಶಾಸಕಿ ಹಾಗೂ ಕುಸ್ತಿಪಟು ವಿನೇಶ್ ಫೋಗಟ್ ಹೇಳಿದ್ದಾರೆ.
'ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲೂಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಮಹಿಳಾ ಕುಸ್ತಿಪಟುಗಳ ಹೋರಾಟದಲ್ಲಿ ಜನರು ಭಜರಂಗ್ ಪೂನಿಯಾ ಹಾಗೂ ವಿನೇಶ್ ಫೋಗಟ್ ಅವರಿಗೆ ಹತ್ತಿರವಾಗುತ್ತಿದ್ದಂತೆ, ಅವರ ತಲೆಯಲ್ಲಿ ದುರಾಸೆ ತುಂಬಿತು. ಇದು ಹೋರಾಟದ ಹಾದಿಯಲ್ಲಿ ಬಿರುಕು ಮೂಡಿಸಿತು' ಎಂದು ಕುಸ್ತಿಪಟು ಸಾಕ್ಷಿ ಮಲಿಕ್ ಅವರು ತಮ್ಮ ಇತ್ತೀಚಿನ ಕೃತಿ 'ವಿಟ್ನೆಟ್'ನಲ್ಲಿ ದಾಖಲಿಸಿರುವುದರ ಕುರಿತು ಕೇಳಿದ ಪ್ರಶ್ನೆಗೆ ವಿನೇಶ್ ಉತ್ತರಿಸಿದ್ದಾರೆ.
'ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಿಂದ ವಿನಾಯ್ತಿಯನ್ನು ಒಪ್ಪಿಕೊಂಡ ಭಜರಂಗ್ ಪೂನಿಯಾ ಅವರ ನಿರ್ಧಾರವನ್ನು ಗಮನಿಸಿದರೆ ಇಡೀ ಹೋರಾಟದಲ್ಲಿ ವಿನೇಶ್ ಹಾಗೂ ಭಜರಂಗ್ ಅವರ ನಿರ್ಧಾರ ಸ್ವಾರ್ಥದಂತೆ ಕಂಡುಬಂತು. ಹೋರಾಟದಲ್ಲಿ ಜನರು ಈ ಇಬ್ಬರಿಗೆ ಹೆಚ್ಚು ಹತ್ತಿರವಾದರು. ಅದು ಅವರ ತಲೆಯಲ್ಲಿ ದುರಾಸೆಯನ್ನು ಬಿತ್ತಿತು' ಎಂದು ಸಾಕ್ಷಿ ಬರೆದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ವಿನೇಶ್, 'ಇದು ಅವರ ವೈಯಕ್ತಿಕ ಹೇಳಿಕೆ. ಅದನ್ನು ನಾನು ಒಪ್ಪುವುದಿಲ್ಲ. ನಾನು ದುರ್ಬಲಳಾಗದ ಹೊರತೂ, ಹೋರಾಟ ದುರ್ಬಲವಾಗದು' ಎಂದಿದ್ದಾರೆ.
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಜುಲಾನಾ ಕ್ಷೇತ್ರದಿಂದ ಗೆಲುವು ಸಾಧಿಸಿರುವ ವಿನೇಶ್, 'ನಾನು ಬದುಕಿರುವವರೆಗೂ ಹೋರಾಟ ಮುಂದುವರಿಯಲಿದೆ' ಎಂದು ಬ್ರಿಜ್ ಭೂಷಣ್ ವಿರುದ್ಧ ಗುಡುಗಿದ್ದರು.
'ನಾವು ಆಟವಾಡುವಾಗ ದೇಶದ ಕೋಟ್ಯಂತರ ಜನರ ಭರವಸೆಯ ಹೊಣೆ ನಮ್ಮ ಮೇಲಿರುತ್ತದೆ. ಇದೀಗ ನಾನು ಕಾಂಗ್ರೆಸ್ ಪಕ್ಷದಿಂದ ಚನಾವಣೆಯಲ್ಲಿ ಸ್ಪರ್ಧಿಸಿ ಶಾಸಕಿಯಾಗಿದ್ದೇನೆ. ಈಗಲೂ ಇಡೀ ದೇಶ ನನ್ನ ಕಡೆ ನೋಡುತ್ತಿದೆ ಎಂದೇ ನಂಬಿದ್ದೇನೆ. ಬೀದಿಯಿಂದ ಒಲಿಂಪಿಕ್ಸ್‌ವರೆಗೂ ನಾವು ನಡೆಸಿದ ಹೋರಾಟವು ಸಾಹಸ ಮನೋಭಾವದ ಈ ದೇಶದ ಹೆಣ್ಣುಮಕ್ಕಳು ಹಾಗೂ ಸೋದರಿಯರಿಗಾಗಿ ಆಗಿದೆ. ರೈತರು, ಯುವಜನತೆ ಹಾಗೂ ಕ್ರೀಡಾಪಟುಗಳು ಈ ದೇಶದ ಅಡಿಪಾಯ' ಎಂದಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನ ಕುಸ್ತಿಯಲ್ಲಿ 50 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನೇಶ್, ಫೈನಲ್‌ನಲ್ಲಿ 100 ಗ್ರಾಂ ಅಧಿಕ ತೂಕದಿಂದಾಗಿ ಅನರ್ಹಗೊಂಡು, ಪದಕ ವಂಚಿತರಾಗಿದ್ದರು.