ನವದೆಹಲಿ: ಬಾಲ ಸಂತ ಎಂದೇ ಖ್ಯಾತರಾಗಿರುವ ಅಭಿನವ್ ಅರೋರಾ ಅವರು ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಜಗದ್ಗುರು ರಾಮಭದ್ರಾಚಾರ್ಯರು ಅಭಿನವ್ ಅವರನ್ನು ನಿಂದಿಸಿ ವೇದಿಕೆಯಿಂದ ಕೆಳಗಿಳಿಯುವಂತೆ ಮಾಡಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇದೀಗ ಈ ಬಗ್ಗೆ ಅಭಿನವ್ ಅರೋರಾ ಪ್ರತಿಕ್ರಿಯಿಸಿದ್ದಾರೆ.
'ಬಾಲ್ ಸಂತ ಬಾಬಾ' ಎಂದು ಕರೆಯಲ್ಪಡುವ ಹತ್ತು ವರ್ಷದ ಅಭಿನವ್ ಅರೋರಾ ಇತ್ತೀಚೆಗೆ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಅದ್ದೂರಿ ನೃತ್ಯ ಪ್ರದರ್ಶಿಸಿ ವಿವಾದದ ಕೇಂದ್ರಬಿಂದುವಾಗಿದ್ದಾನೆ. ಈ ಘಟನೆಯು ಹಿಂದೂ ಆಧ್ಯಾತ್ಮಿಕ ನಾಯಕ ಸ್ವಾಮಿ ರಾಮಭದ್ರಾಚಾರ್ಯರ ಕೋಪಕ್ಕೆ ಕಾರಣವಾಯಿತು. ಅವರು ಸಭ್ಯತೆಯ ಕೊರತೆಗಾಗಿ ಸಾರ್ವಜನಿಕವಾಗಿ ಯುವಕನನ್ನು ಖಂಡಿಸಿದರು. ಈ ವಾಗ್ವಾದವು ಅಭಿನವ್ ಅವರ ಆಧ್ಯಾತ್ಮಿಕ ಸತ್ಯಾಸತ್ಯತೆ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಖ್ಯಾತಿಯನ್ನು ಬಯಸುವ ಬಾಲ ಪ್ರತಿಭೆಗಳ ಪರಿಣಾಮಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
ನಿಂದಿಸುವ ವೈರಲ್ ವಿಡಿಯೋದಲ್ಲಿ ಅಭಿನವ್ ಅರೋರಾ ಅವರು, ಆ ವಿಡಿಯೋ ಪ್ರತಾಪಗಢದ್ದು ಎಂದು ಹೇಳಲಾಗುತ್ತಿದೆ. ಅದು ಸುಳ್ಳು. ಈ ವೀಡಿಯೊ ಒಂದು ವರ್ಷ ಹಳೆಯದು ಅಂದರೆ 2023ರದ್ದು, ನಿಮ್ಮ ಪೋಷಕರು ನಿಮ್ಮನ್ನು ಎಂದಿಗೂ ಗದರಿಸಲಿಲ್ಲವೇ? ನಿಮ್ಮ ಶಿಕ್ಷಕರು ನಿಮ್ಮನ್ನು ಎಂದಿಗೂ ಗದರಿಸಲಿಲ್ಲವೇ? ಇಂತಹ ನಾಡಿನ ಮಹಾನ್ ಸಂತ ಜಗದ್ಗುರು ರಾಮಭದ್ರಾಚಾರ್ಯರು ನನ್ನನ್ನು ಗದರಿಸಿದ್ದರೆ, ಇದನ್ನೇಕೆ ದೇಶದ ದೊಡ್ಡ ವಿಷಯವನ್ನಾಗಿ ಮಾಡಲಾಗುತ್ತಿದೆ? ಎಂದು ಕೇಳಿದರು.
ಇದಾದ ನಂತರ ಅಭಿನವ್ ಅರೋರಾ, ಜಗದ್ಗುರು ರಾಮಭದ್ರಾಚಾರ್ಯರು ಕೂಡ ನನ್ನನ್ನು ತಮ್ಮ ಕೋಣೆಗೆ ಕರೆದು ಆಶೀರ್ವಾದ ಮಾಡಿದ್ದರು. ಆದರೆ ರಾಮಭದ್ರಾಚಾರ್ಯರು ನನ್ನನ್ನು ನಿಂದಿಸಿದ್ದಾರೆ ಎಂದು ನೀವು ಹೇಳಿದ್ದೀರಿ. ಎಂಟನೇ ವಯಸ್ಸಿನಲ್ಲಿ ನಿಮ್ಮ ಶಿಕ್ಷಕರು ನಿಮ್ಮನ್ನು ಎಂದಾದರೂ ಗದರಿಸಿದ್ದೀರಾ? ಎಂಟು-ಒಂಬತ್ತನೇ ವಯಸ್ಸಿನಲ್ಲಿ ನೀವು ಯಾವುದೇ ತಪ್ಪುಗಳನ್ನು ಮಾಡಲಿಲ್ಲವೇ?" ಎಂದು ಮರುಪ್ರಶ್ನೆ ಹಾಕಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಶಾಲೆಗೆ ಹೋಗುವುದಿಲ್ಲ ಎಂಬ ಪ್ರಶ್ನೆಗೆ ಅಭಿನವ್, ನೀವು ಶಾಲೆಗೆ ಹೋಗಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಆದರೆ ನಾನು ಶಾಲೆಗೆ ಹೋಗುತ್ತೇನೆ. ಇವತ್ತು ಇವರಿಂದ ಶಾಲೆಗೆ ಹೋಗಲು ಆಗದಂತಹ ಪರಿಸ್ಥಿತಿ ಬಂದಿದೆ. ನನ್ನಿಂದಾಗಿ ನನ್ನ ತಂಗಿಯೂ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಅಭಿನವ್ ಅರೋರಾ ಹೇಳಿದರು.