HEALTH TIPS

ಅಯೋಧ್ಯೆಯಿಂದ ಶಬರಿಮಲೆಗೆ ಪಾದಯಾತ್ರೆ ಹೊರಟಿದ್ದ ಕಾಸರಗೋಡಿನ ಯುವಕ ಹೃದಯಾಘಾತದಿಂದ ಮೃತ್ಯು

ಕಾಸರಗೋಡು : ಅಯೋಧ್ಯೆಯಿಂದ ಶಬರಿಮಲೆಗೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಿದ್ದ ಕಾಸರಗೋಡಿನ ಅಯ್ಯಪ್ಪ ಭಕ್ತರೊಬ್ಬರು ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಹ್ರದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಾಸರಗೋಡು ಕೂಡ್ಲು ಪಚ್ಚಕ್ಕಾಡಿನ ದಿ.ಅಪ್ಪು ಅವರ ಪುತ್ರ ಶಿವಪ್ರಸಾದ್ (45)ಮೃತಪಟ್ಟವರು. ಕೂಡ್ಲುವಿನಲ್ಲಿ ಕೇಟರಿಂಗ್‍ನ ನಿರ್ವಾಹಕರಾಗಿದ್ದರು.

ಕಳೆದ 24ವರ್ಷಗಳಿಂದ ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿದಾನ ತೆರಳುತ್ತಿದ್ದ ಶಿವಪ್ರಸಾದ್ ಅವರು ಕಳೆದ ಮೂರು ವರ್ಷಗಳಿಂದ ಪಾದಯಾತ್ರೆ ಮೂಲಕ ತೆರಳುತ್ತಿದ್ದರು. ಈ ಬಾರಿ ಅಯೋಧ್ಯೆಯಿಂದ ಸನ್ನಿದಾನಕ್ಕೆ ಯಾತ್ರೆ ಕೈಗೊಂಡಿದ್ದರು. ಇದಕ್ಕಾಗಿ ಸೆ. 25ರಂದು ಕಾಸರಗೋಡಿನಿಂದ ಅಯೋಧ್ಯೆ ತೆರಳಿದ್ದ ಇವರು, ಅ. 1ರಂದು ತನ್ನ ಸನೇಹಿತ ಕೂಡ್ಲು ನಿವಾಸಿ ಹರೀಶ್ ಅವರೊಂದಿಗೆ ಪಾದಯತ್ರೆ ಅರಂಭಿಸಿದ್ದರು. 

ಬುಧವಾರ ಬೆಳಗ್ಗೆ ಸಿಯೋನಿ ಪ್ರದೇಶಕ್ಕೆ ತಲುಪುತ್ತಿದ್ದಂತೆ ಎದೆನೋವು ಕಾಣಿಸಿಕೊಂಡ ಇವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಮೃತದೇಹ ಊರಿಗೆ ತರಲು ಸಿದ್ಧತೆ ನಡೆಯುತ್ತಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries