ಡೆಹ್ರಾಡೂನ್: ದೇಶದಲ್ಲಿ ಮತ್ತೊಮ್ಮೆ ರೈಲು ( Train ) ವಿಧ್ವಂಸಕ ಯತ್ನ ಬೆಳಕಿಗೆ ಬಂದಿದೆ. ಉತ್ತರಾಖಂಡ ( Uttarakhand ) ದ ರೂರ್ಕಿಯ ದಂಧೇರಾ ರೈಲು ನಿಲ್ದಾಣದ ಬಳಿಯ ಹಳಿಯಲ್ಲಿ ಗ್ಯಾಸ್ ಸಿಲಿಂಡರ್ ( Gas Cylinder ) ಪತ್ತೆಯಾಗಿದೆ.
ಡೆಹ್ರಾಡೂನ್: ದೇಶದಲ್ಲಿ ಮತ್ತೊಮ್ಮೆ ರೈಲು ( Train ) ವಿಧ್ವಂಸಕ ಯತ್ನ ಬೆಳಕಿಗೆ ಬಂದಿದೆ. ಉತ್ತರಾಖಂಡ ( Uttarakhand ) ದ ರೂರ್ಕಿಯ ದಂಧೇರಾ ರೈಲು ನಿಲ್ದಾಣದ ಬಳಿಯ ಹಳಿಯಲ್ಲಿ ಗ್ಯಾಸ್ ಸಿಲಿಂಡರ್ ( Gas Cylinder ) ಪತ್ತೆಯಾಗಿದೆ.
ಬೆಂಗಾಲ್ ಇಂಜಿನಿಯರ್ ಗ್ರೂಪ್ ಮತ್ತು ಸೆಂಟರ್‌ನ ಪ್ರಧಾನ ಕಚೇರಿಯ ಬಳಿ ಮಿಲಿಟರಿ ಸಾರಿಗೆಗೆ ಬಳಸುವ ಮಾರ್ಗದಲ್ಲಿ ಈ ಗ್ಯಾಸ್ ಸಿಲಿಂಡರ್ ( Gas Cylinder ) ಪತ್ತೆಯಾಗಿದೆ.
ಗೂಡ್ಸ್ ರೈಲಿನ ಲೋಕೋ ಪೈಲಟ್ ಗ್ಯಾಸ್ ಸಿಲಿಂಡರ್ ಅನ್ನು ಪತ್ತೆ ಮಾಡಿ, ತುರ್ತು ಬ್ರೇಕ್ ಹಾಕಿದ ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸಿಲಿಂಡರ್ ಅನ್ನು ಹಳಿಯಿಂದ ತೆಗೆದಿದ್ದಾರೆ. ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ.
ದೇಶದಲ್ಲಿ ಕೆಲ ದಿನಗಳಿಂದ ರೈಲು ಹಾಳು ಮಾಡುವ ಯತ್ನಗಳು ನಡೆಯುತ್ತಿವೆ. ಈ ಹಿಂದೆ ಗುಜರಾತ್‌ನ ಸೂರತ್‌ನಲ್ಲಿ ರೈಲು ಹಳಿಯಲ್ಲಿ ಫಿಶ್ ಪ್ಲೇಟ್ಸ್ ಮತ್ತು ಬೋಲ್ಟ್ಗಳನ್ನು ಸಡಿಲ ಮಾಡಲಾಗಿತ್ತು. ಇನ್ನು ಕಾನ್ಪುರದ ರೈಲು ಮಾರ್ಗದಲ್ಲಿ ಗ್ಯಾಸ್ ಸಿಲಿಂಡರ್ ಕೂಡ ಪತ್ತೆಯಾಗಿತ್ತು. ಕೆಲವೆಡೆ ಸಿಮೆಂಟ್ ಬ್ಲಾಕ್‌ಗಳು ಮತ್ತು ಕಬ್ಬಿಣದ ಸರಳುಗಳು ಕಂಡುಬಂದಿವೆ. ತನಿಖೆ ಮುಂದುವರೆದಂತೆ ಹೊಸ ಹೊಸ ಘಟನೆಗಳು ವರದಿಯಾಗುತ್ತಿವೆ.