ಕೀವ್ : ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು ಸೋಮವಾರ ಕೀವ್‌ಗೆ ದಿಢೀರ್ ಭೇಟಿ ನೀಡಿದರು.
ಉಕ್ರೇನ್ ರಾಜಧಾನಿ ಮೇಲೆ ರಷ್ಯಾವು ಡ್ರೋನ್ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಅವರು ಭೇಟಿ ನೀಡಿದರು.
'ಅಂತರರಾಷ್ಟ್ರೀಯ ಸಮುದಾಯದೊಟ್ಟಿಗೆ ಅಮೆರಿಕವು ಉಕ್ರೇನ್‌ಗೆ ನೀಡಿರುವ ಬೆಂಬಲ ಮುಂದುವರಿಯಲಿದೆ' ಎಂದು ಆಸ್ಟಿನ್ 'ಎಕ್ಸ್'ನಲ್ಲಿ ಹೇಳಿದ್ದಾರೆ.
ರಷ್ಯಾ ದಾಳಿಯನ್ನು ತೀವ್ರಗೊಳಿಸಿದ ಬೆನ್ನಲ್ಲೇ 'ಪ್ರತಿದಾಳಿಗೆ ಮತ್ತಷ್ಟು ಬೆಂಬಲ ನೀಡಬೇಕು' ಎಂದು ಪಶ್ಚಿಮದ ಮಿತ್ರರಾಷ್ಟ್ರಗಳನ್ನು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಕೋರಿದ್ದರು.