ತಿರುವನಂತಪುರಂ: ಎಡಿಎಂ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪೆಟ್ರೋಲ್ ಪಂಪ್‍ಗೆ ಅನುಮತಿ ನೀಡುವ ವಿಚಾರವಾಗಿ ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ತನಿಖೆ ಆರಂಭಿಸಿದ್ದು, ಪರಿಯಾರಂ ವೈದ್ಯಕೀಯ ಕಾಲೇಜಿನ ಗುತ್ತಿಗೆ ಕಾರ್ಮಿಕ ಪ್ರಶಾಂತ್‍ಗೆ ಡಿಎಂಒ ಅನುಮತಿ ನೀಡಿದ್ದರ ಬಗ್ಗೆ ತನಿಖೆ ನಡೆಯಲಿದೆ. ಎಡಿಎಂ ವಿರುದ್ಧ ಲಂಚದ ದೂರು, ಆತ್ಮಹತ್ಯೆಗೈದ ಪ್ರಕರಣವೂ ಊರ್ಜಿತದಲ್ಲಿದೆ.
ಪೆಟ್ರೋಲ್ ಪಂಪ್ ನಡೆಸಲು ಪ್ರಶಾಂತ್ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆದಿದ್ದರಲ್ಲಿ ಅಕ್ರಮ ನಡೆದಿದೆಯೇ ಎಂದು ಪರಿಶೀಲಿಸಲಾಗುತ್ತಿದೆ.
ಕೇಂದ್ರ ರಾಜ್ಯ ಸಚಿವ ಸುರೇಶ್ ಗೋಪಿ ಅವರ ಸೂಚನೆ ಮೇರೆಗೆ ಪೆಟ್ರೋಲಿಯಂ ಸಚಿವಾಲಯ ತನಿಖೆ ನಡೆಸುತ್ತಿದೆ. ಪ್ರಶಾಂತ್ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಪಿ.ದಿವ್ಯಾ ಅವರ ಬೇನಾಮಿಯಾಗಿದ್ದು, ಪೆಟ್ರೋಲ್ ಪಂಪ್ ಅನುಮತಿ ರದ್ದುಪಡಿಸಬೇಕು ಎಂದು ಬಿಜೆಪಿ ಮುಖಂಡರು ಸುರೇಶ್ ಗೋಪಿ ಅವರಿಗೆ ಈ ಹಿಂದೆಯೇ ದೂರು ನೀಡಿದ್ದರು.
ಚೆಮನೈನಲ್ಲಿ ಕ್ರಿಶ್ಚಿಯನ್ ಚರ್ಚ್ ಒಡೆತನದ 40 ಸೆಂಟ್ಸ್ ಭೂಮಿಯನ್ನು 20 ವರ್ಷಗಳ ಕಾಲ ಗುತ್ತಿಗೆ ನೀಡಿ ಪೆಟ್ರೋಲ್ ಪಂಪ್‍ಗೆ ಪ್ರಶಾಂತ್ ಅನುಮತಿ ಕೋರಿದ್ದರು. ಪೆಟ್ರೋಲ್ ಪಂಪ್ ಆರಂಭಿಸಲು ಅನುಮತಿ ಕೋರಿ ಎಡಿಎಂ ಬಳಿ ಹೋದವರು ಪ್ರಶಾಂತ್. ಆದರೆ ಪಂಪ್ ಅಳವಡಿಸಲು ಉದ್ದೇಶಿಸಿರುವ ಸ್ಥಳದ ಸಮೀಪವೇ ರಸ್ತೆ ತಿರುವಿದ್ದ ಕಾರಣ ಪಂಪ್ ಗೆ ಅನುಮತಿ ನೀಡುವುದು ಸುಲಭದ ಮಾತಾಗಿರಲಿಲ್ಲ. ಏತನ್ಮಧ್ಯೆ, ಕಣ್ಣೂರಿನಿಂದ ವರ್ಗಾವಣೆಗೊಂಡು ತೆರಳುವ ಮುನ್ನ ನವೀನ್ ಬಾಬು ಪಂಪ್ ನಿರ್ಮಾಣಕ್ಕೆ ಎನ್.ಒ.ಸಿ. ನೀಡಿದ್ದು, ಎನ್ ಒಸಿ ಪಡೆಯಲು ಹಣ ಪಡೆದು ಅನುಮತಿ ನೀಡಲಾಗಿದೆ ಎಂದು ನವೀನ್ ಬಾಬು ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಜಿ.ಪಂ.ಅಧ್ಯಕ್ಷೆ ಪಿ.ಪಿ.ದಿವ್ಯಾ ಬಹಿರಂಗವಾಗಿ ಆರೋಪಿಸಿದ್ದರು. ಇದರ ನಂತರ, ಮರುದಿನ ಬೆಳಿಗ್ಗೆ ಎಡಿಎಂ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು
ಆದರೆ ನವೀನ್ ಬಾಬು ಭ್ರಷ್ಟನಲ್ಲ, ಒಳ್ಳೆಯ ಅಧಿಕಾರಿ ಎಂದು ಸಿಪಿಎಂ ಮುಖಂಡರು, ಸಚಿವರು, ಕಂದಾಯ ಇಲಾಖೆ ಅಧಿಕಾರಿಗಳು ಸಾಕ್ಷಿ ಹೇಳುತ್ತಿದ್ದಾರೆ. ಎಡಿಎಂ ಸಾವಿನ ಮೂರು ದಿನಗಳ ನಂತರ, ನಿನ್ನೆಯಷ್ಟೇ ಪಿಪಿ ದಿವ್ಯಾ ಅವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆಯ ಆರೋಪ ಹೊರಿಸಲಾಗಿದೆ.