ಬದಿಯಡ್ಕ: ಕೇರಳ ಮರಾಟಿ ಶಾರದೋತ್ಸವ ಸಮಿತಿಯ 17ನೇ ವರ್ಷದ ಶಾರದೋತ್ಸವವು ಬದಿಯಡ್ಕ ಶ್ರೀ ಗುರುಸದನದಲ್ಲಿ ಶುಕ್ರವಾರ ಹಾಗೂ ಶನಿವಾರಗಳಂದು ಬದಿಯಡ್ಕ ಶ್ರೀಗುರುಸದನದಲ್ಲಿ ಜರಗಿತು.
ಶುಕ್ರವಾರ ಬೆಳಗ್ಗೆ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ, ಪೂಜೆ, ಮಹಾಗಣಪತಿ ಹೋಮ, ಶಾರದಾಂಬ ಮಹಿಳಾ ಭಜನ ಸಂಘದವರಿಂದ ಭಜನೆ ನಡೆಯಿತು. ನಿವೃತ್ತ ವಿದ್ಯುತ್ ಇಲಾಖೆಯ ಉದ್ಯೋಗಿ ಐತ್ತಪ್ಪ ನಾಯ್ಕ ವಿದ್ಯಾಗಿರಿ ಧ್ವಜಾರೋಹಣ ನೆರವೇರಿಸಿದರು. ನಂತರ ವಾಹನಪೂಜೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ, ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ವಿದುಷಿ ಗೀತಾ ಸಾರಡ್ಕ ಮತ್ತು ಶಿಷ್ಯರಿಂದ ನೆರವೇರಿತು. ಕಲಾ ಸಾಂಸ್ಕøತಿಕ ಕಾರ್ಯಕ್ರಮ, ಭಕ್ತಿಗೀತೆ, ಭರತನಾಟ್ಯ, ಸಮೂಹ ನೃತ್ಯ, ಮರಾಟಿ ಭಾಷೆಯಲ್ಲಿ ಭಾಷಣ, ಮಿಮಿಕ್ರಿ, ಸಂಗೀತ ಕಾರ್ಯಕ್ರಮ ಜರಗಿತು. ಶಾರದಾಂಬ ಯಕ್ಷಗಾನ ಕಲಾಸಂಘ ಬದಿಯಡ್ಕ ಇವರಿಂದ ಕರ್ನಾಟಕ ಜಾನಪದ ಲೋಕ ಪ್ರಶಸ್ತಿ ಪುರಸ್ಕøತ ಜಯರಾಮ ಪಾಟಾಳಿ ಪಡುಮಲೆ ಇವರ ನಿರ್ದೇಶನದಲ್ಲಿ ಕೊಲ್ಲೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಶನಿವಾರ ಬೆಳಗ್ಗೆ ಶ್ರೀ ಧರ್ಮಶಾಸ್ತಾ ಭಜನಾ ಸಂಘ ನೀರ್ಚಾಲು ಇವರಿಂದ ಭಜನೆ, ಸುಮಾಶ್ರೀ ಇಡಿಯಡ್ಕ ಮತ್ತು ಬಳಗದವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಜರಗಿತು. ವೇದಮೂರ್ತಿ ಪಟ್ಟಾಜೆ ವೆಂಕಟೇಶ್ವರ ಭಟ್ ನೇತೃತ್ವದಲ್ಲಿ ವಿದ್ಯಾರಂಭ, ಪೂಜೆ ನಡೆಯಿತು.