ಬದಿಯಡ್ಕ:: ಹಿಂದುಳಿದ ಗ್ರಾಮಪಂಚಾಯಿತಿ ಎಂಬ ಹಣೆಪಟ್ಟಿಯನ್ನು ಕೊಟ್ಟಿರುವ ಕೇರಳ ಸರ್ಕಾರ ಕುಂಬ್ಡಾಜೆ ಗ್ರಾಮಕಚೇರಿಯನ್ನು ಸ್ಮಾರ್ಟ್ ಗ್ರಾಮಕಚೇರಿಯಾಗಿ ಪರಿವರ್ತಿಸಿದೆ.
ಆದರೆ ಉದ್ಘಾಟನೆಗೊಂಡು ವರ್ಷ ಪೂರ್ತಿಯಾಗುವುದಕ್ಕೆ ಮೊದಲೇ ಕಚೇರಿಯಲ್ಲಿ ಗ್ರಾಮಾಧಿಕಾರಿಯವರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ಇದ್ದ ಗ್ರಾಮಾಧಿಕಾರಿಯವರು ರಜೆ ಮೇಲೆ ತೆರಳಿದ್ದಾರೆ. ಬದಲಿ ವ್ಯವಸ್ಥೆಗೆ ನೆಟ್ಟಣಿಗೆ ಗ್ರಾಮಾಧಿಕಾರಿಯವರಿಗೆ ಹೆಚ್ಚುವರಿ ಚಾರ್ಜ್ ನೀಡಲಾಗಿದೆ.
ದುಃಸ್ಥಿತಿಯಲ್ಲಿ ಕುಂಬ್ಡಾಜೆ ಗ್ರಾಮಕಚೇರಿ :
ಕುಂಬ್ಡಾಜೆ ಗ್ರಾಮ ಕಚೇರಿಯು ಉಬ್ರಂಗಳ ಕುಂಬ್ಡಾಜೆ ಎಂಬ ಎರಡು ಗ್ರಾಮಗಳನ್ನು ಒಳಗೊಂಡಿದೆ. ಇಲ್ಲಿ ಗ್ರಾಮಾಧಿಕಾರಿಗಳು ಸೇರಿ ಒಟ್ಟು 6 ಸಿಬ್ಬಂದಿ ಇರಬೇಕಾಗಿದ್ದು, ಈಗ ಒಬ್ಬರೇ ಇದ್ದು ಅತ್ಯಂತ ದುಸ್ತಿತಿಗೆ ತಲುಪಿದೆ. ಪ್ರಧಾನಮಂತ್ರಿ ಅವಾಸ್ ಯೋಜನೆಯ ಫಲಾನುಭವಿಗಳಿಗೆ ಪಂಚಾಯಿತಿಯಲ್ಲಿ ಮನೆಗಳು ಮಂಜೂರಾಗಿದ್ದು, ಅರ್ಜಿದಾರರು ಅಗತ್ಯ ದಾಖಲೆಗಳಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಾಧಿಕಾರಿ, ವಿಲ್ಲೇಜ್ ಅಸಿಸ್ಟೆಂಟ್, ಎರಡು ಫೀಲ್ಡ್ ಆಫೀಸರ ಖಾಲಿ ಇರುವ ಹುದ್ದೆಗಳಿಗೆ ಸಿಬ್ಬಂದಿಗಳ ನೇಮಕಾತಿಯನ್ನು ಮಾಡಬೇಕು, ಅಧಿಕಾರಿಗಳು ಈ ನಿಟ್ಟಿನಲ್ಲಿ ಕೂಡಲೇ ಎಚ್ಚೆತ್ತುಕೊಳ್ಳಬೇಕಾಗಿ ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಪ್ರಧಾನ ಕಾರ್ಯದರ್ಶಿ ಶಶಿಧರ ತೆಕ್ಕೆಮೂಲೆ ಅಗ್ರಹಿಸಿದ್ದಾರೆ. ಕೂಡಲೇ ನೇಮಕಾತಿಯನ್ನು ನಡೆಸಿ ನಾಡಿನ ಜನತೆಗೆ ನ್ಯಾಯವನ್ನು ದೊರಕಿಸಿಕೊಡದಿದ್ದಲ್ಲಿ ಬಿಜೆಪಿ ಪಂಚಾಯತಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆಯನ್ನು ಎದುರಿಸಬೇಕಾದೀತು ಎಂದು ಅವರು ಪ್ರಕಟಣೆಯನ್ನು ತಿಳಿಸಿದ್ದಾರೆ.