HEALTH TIPS

ಮಹಿಳೆ ನಾಪತ್ತೆ

ಬದಿಯಡ್ಕ: ಪೆರ್ಲ ನಲ್ಕದ ಜಗದೀಶ್ ಅವರ ಪತ್ನಿ ಹೇಮಲತ(40) ನಾಪತ್ತೆಯಾಗಿರುವುದಾಗಿ ಬದಿಯಡ್ಕ ಪೋಲೀಸರಿಗೆ ದೂರು ನೀಡಲಾಗಿದೆ. ಅ.18 ರಂದು ಬೆಳಗ್ಗೆ ಮನೆಯಿಂದ ಹೊರಗೆ ತೆರಳಿದ ಹೇಮಲತ ಮನೆಗೆ ವಾಪಸಾಗಿಲ್ಲ. ಮಧ್ಯಾಹ್ನ ಪತಿಗೆ ಪೋನ್ ಮಾಡಿ ತಾನು ಜುವೆಲ್ಲರಿಯಲ್ಲಿರುವುದಾಗಿ ತಿಳಿಸಿದ್ದರು. ಅನಂತರ ಆಕೆಯ ಕುರಿತು ಯಾವುದೇ ಮಾಹಿತಿಯಿಲ್ಲದುದರಿಂದ ಪೋಲೀಸರಿಗೆ ದೂರು ನೀಡಲಾಗಿದೆ. ಇದೇ ವೇಳೆ ನಾಪತ್ತೆಯಾದ ಹೇಮಲತ ಜುವೆಲ್ಲರಿಯಲ್ಲಿ 40 ಸಾವಿರ ರೂ. ಚಿನ್ನಾಭರಣ ಮಾರಾಟ ಮಾಡಿದ್ದಾಗಿ ತಿಳಿದು ಬಂದಿದೆ. ಸಂಜೆ 4 ಗಂಟೆಗೆ ಹೇಮಲತ ಅವರನ್ನು ಪೆರ್ಲ ಪೇಟೆಯಲ್ಲಿ ಕಂಡವರಿದ್ದಾರೆ. ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries