ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡಿನ ಗಡಿನಾಡು ಕಾಸರಗೋಡಿನ ಬಹುಮುಖ ಪ್ರತಿಭೆ, ಧಾರ್ಮಿಕ, ಸಾಂಸ್ಕøತಿಕ, ಶೈಕ್ಷಣಿಕ ಕ್ಷೇತ್ರದ ಸಾಧಕ ಚೆನ್ನೈ ಬ್ಲೋಬಲ್ ಹ್ಯುಮನ್ ಪೀಸ್ ಯೂನಿವರ್ಸಿಟಿ ವರ್ಚುವಲ್ ಇನ್‍ಸ್ಟಿಟ್ಯುಟ್(ರಿ)ಡೆಲ್ವಾರ್ ಸ್ಟೇಟ್, ಯುಎಸ್‍ಎ ಯ ಗೌರವ ಡಾಕ್ಟರೇಟ್ ಪ್ರಶಸ್ತಿ ಪಡೆದಿರುವ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಕಾಸರಗೋಡು ತಾಲೂಕು ಘಟಕ ಅಧ್ಯಕ್ಷರೂ ಆಗಿರುವ ಕೆ.ಎನ್.ವೆಂಕಟ್ರಮಣ ಹೊಳ್ಳ ಕಾಸರಗೋಡು ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಜರಗಿದ 26 ನೇ ಭಜನಾ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಶಾಲು ಹೊದಿಸಿ ಗೌರವಿಸಿದರು. ವೆಂಕಟ್ರಮಣ ಹೊಳ್ಳ ಅವರ ಪತ್ನಿ ರೂಪಕಲಾ ಹೊಳ್ಳ ಜೊತೆಗಿದ್ದರು.