ಒಟ್ಟಾವಾ: ಕೆನಡಾ ನೆಲದಲ್ಲಿ ಭಾರತ ಸರ್ಕಾರ ನಡೆಸಿದೆ ಎನ್ನಲಾದ ಹಿಂಸಾಚಾರಕ್ಕೆ ಸಂಬಂಧಿಸಿದ ಆರೋಪಗಳ ಬಗ್ಗೆ ತನಿಖೆ ನಡೆಯುತ್ತಿರುವಾಗ, ಇಲ್ಲಿನ ಸಿಖ್ ಸಮುದಾಯವು ಈ ಕುರಿತಂತೆ ಮಾತನಾಡಬೇಕು ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (ಆರ್‌ಸಿಎಂಪಿ) ಕಮಿಷನರ್ ಮೈಕ್ ಡುಹೆಮ್ ಒತ್ತಾಯಿಸಿದ್ದಾರೆ.

ತನಿಖೆಗೆ ಸಂಬಂಧಿಸಿದ ಮಾಹಿತಿ ಹೊಂದಿರುವವರು ಇದೀಗ ಮುಂದೆ ಬರಬೇಕು ಎಂದು ರೇಡಿಯೊ ಕೆನಡಾಕ್ಕೆ ಮಂಗಳವಾರ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಎಂದು ಕೆನಡಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ವರದಿ ಮಾಡಿದೆ.
'ಜನರು ಮುಂದೆ ಬಂದರೆ ನಾವು ಅವರಿಗೆ ಸಹಾಯ ಮಾಡಬಹುದು. ಮುಂದೆ ಬರುವಂತೆ ನಾನು ಅವರನ್ನು ಕೇಳಿಕೊಳ್ಳುತ್ತೇನೆ' ಎಂದು ಕಮಿಷನರ್ ಹೇಳಿದ್ದಾರೆ.
ಕೆನಡಾದಲ್ಲಿ ನರಹತ್ಯೆಗಳು ಸೇರಿದಂತೆ ವ್ಯಾಪಕವಾದ ಹಿಂಸಾಚಾರದ ಕೃತ್ಯಗಳಲ್ಲಿ ಭಾರತ ಸರ್ಕಾರದ 'ಏಜೆಂಟರು' ಪಾತ್ರವಹಿಸಿದ್ದಾರೆ ಎಂದು ಡುಹೆಮ್ ಸೋಮವಾರ ಆರೋಪಿಸಿದ್ದರು.
ಈ ಆರೋಪಗಳನ್ನು ಭಾರತ ತಿರಸ್ಕರಿಸಿದೆ.