ಮುಳ್ಳೇರಿಯ: ಶಿವಳ್ಳಿ ಬ್ರಾಹ್ಮಣ ಸಮಾಜ ಏತಡ್ಕ ವಲಯದ ನೇತೃತ್ವದಲ್ಲಿ ಮುನಿಯೂರು ಹರಿನಾರಾಯಣ ನಡುವಂತಿಲ್ಲಾಯರ ಮನೆಯಲ್ಲಿ ಡಾ.ಪುಂಡೂರು ವೆಂಕಟರಾಜ ಪುಣಿಂಚತ್ತಾಯರ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು.
ಶಿವಳ್ಳಿ ಬ್ರಾಹ್ಮಣ ಸಮಾಜ ಕೇಂದ್ರ ಸಮಿತಿ ರಕ್ಷಾಧಿಕಾರಿ ಸೀತಾರಾಮ ಕುಂಜತ್ತಾಯರು ಕಾರ್ಯಕ್ರಮ ಉದ್ಘಾಟಿಸಿ ಪುಣಿಂಚತ್ತಾಯರು ಮಾಡಿದ ಸಾಧನೆಗೆ ಸದಾ ಆನತಮಸ್ತಕರಾಗಿರಬೇಕು. ಅವರ ಅಹರ್ನಿಶಿ ಕೊಡುಗೆಯ ಸ್ಮರಣೆ ಹೊಸ ತಲೆಮಾರಿಗೆ ಪ್ರೇರಣೆಯಾಗಬೇಕು ಎಂದರು.
ಮುನಿಯೂರು ಶ್ರೀದರ ನಡುವಂತಿಲ್ಲಾಯ, ವಿಜಯರಾಜ ಪುಣಿಂಚತ್ತಾಯ ಕವಿ, ಶಿವಳ್ಳಿ ಬ್ರಾಹ್ಮಣ ಸಮಾಜ ಮಹಿಳಾ ಘಟಕದ ಅಧ್ಯಕ್ಷೆ ಪ್ರಬಾವತಿ ಕೆದಿಲಾಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕುಮಾರಿ ಅನಘ ಮತ್ತು ಆಶಿತ ಪ್ರಾರ್ಥನೆಗೈದರು. ಈ ಸಂಧರ್ಭದಲ್ಲಿ ಪುಣಿಂಚತ್ತಾಯರು ಬರೆದ ತುಳು ಹಾಡನ್ನುಕೇಂದ್ರ ಸಮಿತಿ ಉಪಾಧ್ಯಕ್ಷೆ ಸೀತಾರತ್ನ ಪುಣಿಂಚತ್ತಾಯ, ಪ್ರಬಾವತಿ ಕೆದಿಲಾಯ, ನಳಿನಿ ಅನಲತ್ತಾಯ, ಕೇಂದ್ರ ಸಮಿತಿ ಕೋಶಾಧಿಕಾರಿ ಸೀಮಾ ಬಳ್ಳುಳಾಯ ಹಾಡಿದರು. ಹರಿನಾರಾಯಣ ನಡುವಂತಿಲ್ಲಾಯ ಸ್ವಾಗತಿಸಿ, ಗೀತಾ ಕುಂಜತ್ತಾಯ ವಂದಿಸಿದರು. ಶಿವಳ್ಳಿ ಬ್ರಾಹ್ಮಣ ಸಮಾಜ ಕೋಶಾಧಿಕಾರಿ ಪಾರ್ವತಿ ಕುಂಜತ್ತಾಯ ನಿರೂಪಿಸಿದರು.