ಇಂಫಾಲ್: ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಅಪಹರಣಕ್ಕೆ ಒಳಗಾಗಿದ್ದ ಇಬ್ಬರು ಯುವಕರನ್ನು ಬಿಡುಗಡೆಗೊಳಿಸಲಾಗಿದೆ. ಏಳು ದಿನಗಳ ಬಳಿಕ ಇಂದು (ಗುರುವಾರ) ಮುಂಜಾನೆ ಅವರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂಫಾಲ್: ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಅಪಹರಣಕ್ಕೆ ಒಳಗಾಗಿದ್ದ ಇಬ್ಬರು ಯುವಕರನ್ನು ಬಿಡುಗಡೆಗೊಳಿಸಲಾಗಿದೆ. ಏಳು ದಿನಗಳ ಬಳಿಕ ಇಂದು (ಗುರುವಾರ) ಮುಂಜಾನೆ ಅವರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ರಾಜ್ಯ ಪೊಲೀಸರು ಮತ್ತು ಅಸ್ಸಾಂ ಪಡೆಗಳ ಬೆಂಗಾವಲಿನಲ್ಲಿ ಇಬ್ಬರು ಯುವಕರು ಸುರಕ್ಷಿತವಾಗಿ ಇಂಫಾಲ್ ತಲುಪಿದ್ದಾರೆ.
ಸೆಪ್ಟೆಂಬರ್ 27ರಂದು ಥೌಬಲ್ ಜಿಲ್ಲೆಯ ಮೂವರು ಯುವಕರನ್ನು ಕಾಂಗ್‌ಪೊಕ್ಪಿಯಲ್ಲಿ ಅಪಹರಿಸಲಾಗಿತ್ತು. ಈ ಪೈಕಿ ಒಬ್ಬನನ್ನು ಬಿಡುಗಡೆ ಮಾಡಿದ್ದು, ಇನ್ನಿಬ್ಬರನ್ನು ಸೆರೆಯಲ್ಲಿ ಇಡಲಾಗಿತ್ತು.
ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್‌ಸಿಂಗ್ 'ಸೆಪ್ಟೆಂಬರ್ 27ರಂದು ಕಾಂಗ್‌ಪೊಕ್ಪಿಯಲ್ಲಿ ಅಪಹರಣಗೊಂಡಿದ್ದ ಇಬ್ಬರು ಯುವಕರು ಸುರಕ್ಷಿತವಾಗಿ ಬಿಡುಗಡೆಗೊಂಡಿದ್ದಾರೆ. ಅವರ ಸುರಕ್ಷಿತ ಬಿಡುಗಡೆಗಾಗಿ ಅವಿರತವಾಗಿ ಶ್ರಮ ವಹಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ನಾನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ' ಎಂದು ಹೇಳಿದ್ದಾರೆ.