ಕಾಸರಗೋಡು: ಕಣ್ಣೂರು ಮುಂಡಾಯತ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 66 ನೇ ರಾಜ್ಯಮಟ್ಟದ ಶಾಲಾ ಒಲಿಂಪಿಕ್ಸ್ ಟೇಕ್ವಾಂಡೋ ಚಾಂಪಿಯನ್‍ಶಿಪ್‍ನಲ್ಲಿ ಕಾಸರಗೋಡು ವಿದ್ಯಾನಗರದ ತನ್‍ಬೀಹುಲ್ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿನಿ ಎ.ಎಂ.ಫಾತಿಮಾ ಚಿನ್ನದ ಪದಕ ಗಳಿಸಿದ್ದಾರೆ. ಫಾತಿಮಾ ಅವರು 63 ಕೆಜಿಯೊಳಗಿನ ತೂಕದ ಬಾಲಕಿಯರ ವಿಭಾಗದಲ್ಲಿ ಸ್ಪರ್ಧಿಸಿದ್ದಾರೆ. ಅವರು ನ. 8 ರಿಂದ 12 ರವರೆಗೆ ಮಧ್ಯಪ್ರದೇಶದ ವಿದಿಶಾದಲ್ಲಿ ನಡೆಯಲಿರುವ ರಾಷ್ಟ್ರೀಯ ಶಾಲಾ ಟೇಕ್ವಾಂಡೋ ಚಾಂಪಿಯನ್‍ಶಿಪ್‍ನಲ್ಲಿ ಕೇರಳದ ಪರವಾಗಿ ಸ್ಪರ್ಧಿಸಲಿದ್ದಾರೆ. ಟೇಕ್ವಾಂಡೋದಲ್ಲಿ ಮೊದಲ ಡಾನ್ ಬ್ಲ್ಯಾಕ್ ಬೆಲ್ಟ್ ಆಗಿರುವ ಫಾತಿಮಾ ಅವರು ಕಳೆದ ಐದು ವರ್ಷಗಳಿಂದ ಸತತವಾಗಿ ರಾಜ್ಯ ಟೇಕ್ವಾಂಡೋದಲ್ಲಿ ಚಿನ್ನದ ಪದಕ ವಿಜೇತರಾಗಿದ್ದಾರೆ. ಕಾಸರಗೋಡು ಯೋಧ ಟೆಕ್ವಾಂಡೋ ಅಕಾಡೆಮಿಯ ಮಾಸ್ಟರ್ ಜಯನ್ ಪೆÇಯಿನಾಚಿ ತರಬೇತುದಾರರಾಗಿದ್ದಾರೆ. ಪ್ಲಸ್ ಒನ್ ವಿದ್ಯಾರ್ಥಿನಿಯಾಗಿರುವ ಫಾತಿಮಾ ವಿದ್ಯಾಭ್ಯಾಸದಲ್ಲೂ ಮುಂಚೂಣಿಯಲ್ಲಿದ್ದು, ಕಳೆದ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿ ಎಪ್ಲಸ್ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. ಇವರು ಜಮೀಲಾ ಮತ್ತು ವಕೀಲ, ದಿ. ಅಶ್ರಫ್ ದಂಪತಿಯ ಪುತ್ರಿ.