ಎರ್ನಾಕುಳಂ: ಭಾರತೀಯ ಕಿಸಾನ್ ಸಂಘದ ಕೇರಳ ಪ್ರಾಂತ್ಯ ಸಮ್ಮೇಳನ ಎರ್ನಾಕುಳಂನ ಭಾಸ್ಕರೀಯಂ ಸಭಾಂಗಣದಲ್ಲಿ ನಡೆಯಿತು. ಅಖಿಲಭಾರತ ಸಂಘಟನಾ ಕಾರ್ಯದರ್ಶಿ ಮೋಹಿನಿ ಮೋಹನ್ ಮಿಶ್ರ ಅವರು ಉದ್ಘಾಟಿಸಿದರು ದೇಶದಲ್ಲಿ ಅತಿ ದೊಡ್ಡ ಕೃಷಿ ಸಂಘ ಭಾರತೀಯ ಕಿಸಾನ್ ಸಂಘವೆಂದು ಗುರುತಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಕೇರಳ ಪ್ರಾಂತ್ಯದಲ್ಲಿ ಸದಸ್ಯರ ಸಂಖ್ಯೆ 1ಲಕ್ಷ ದಾಟುವಂತೆ ಮಾಡಲು ಗ್ರಾಮ ಸಮಿತಿ, ಬ್ಲಾಕ್ ಸಮಿತಿ, ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸಂಪರ್ಕ ಸಭೆ ನಡೆಯಬೇಕು ಎಂದರು.
ಎಲ್ಲಾ ಜಿಲ್ಲೆಗಳಿಂದಲೂ ಕಾರ್ಯಕರ್ತರು ಜವಾಬ್ದಾರಿಗಳನ್ನು ನಿರ್ವಹಿಸಲು ಸೂಚಿಸಲಾಯಿತು. ಪ್ರಾಂತ್ಯ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಡಾ.ಅನಿಲ್ ವೈದ್ಯ ಮಂಗಳಂ, ಪ್ರಧಾನ ಕಾರ್ಯದರ್ಶಿ ವಕೀಲ ರತೀಶ್ ಗೋಪಾಲ್ ಆಯ್ಕೆಯಾದರು. ಕಾಸರಗೋಡು ಜಿಲ್ಲೆಯ ಪ್ರತಿನಿಧಿಗಳಾಗಿ ರಾಮ ಮಾಸ್ತರ್ ಕಳತ್ತೂರು, ವಿನೋದ್ ಕುಮಾರ್, ಜಗನ್ನಾಥ ಮಾಸ್ತರ್, ಕುಂಞÂ್ಞ ರಾಮನ್ ನಂಬಿಯಾರ್, ಬಾಲಕೃಷ್ಣ ಉದುಮ ಮತ್ತು ಶಂಕರನ್ ಕೋಟಪ್ಪಾರ ಭಾಗವಹಿಸಿದ್ದರು. ಹಿರಿಯ ಪ್ರಚಾರಕರು ರಮೇಶ್ ಸಂಘಟನೆ ಕೇರಳದಲ್ಲಿ ಬೆಳೆದ ಗತಿಯನ್ನು ತಿಳಿಸಿದರು. ಅಖಿಲ ಭಾರತೀಯ ಉಪಾಧ್ಯಕ್ಷ ಪೆರುಮಾಳ್ ಅವರು ಭಾಗವಹಿಸಿ ಮಾತನಾಡಿದರು. ಕಾರ್ಯದರ್ಶಿ ನಾರಾಯಣನ್ ಕುಟ್ಟಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ವಕೀಲ ರತೀಶ್ ಗೋಪಾಲ್ ವಂದಿಸಿದರು.