ಕಾಸರಗೋಡು : ನಗರದ ಶ್ರೀ ವೆಂಟಕ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರ ವತಿಯಿಂದ ಯಕ್ಷೋತ್ಸವ ಕಾರ್ಯಕ್ರಮ ಅ.6ರಂದು ಮಧ್ಯಾಹ್ನ 2.30ಕ್ಕೆ ಶ್ರೀ ಪೇಟೆ ವೆಂಕಟ್ರಮಣ ಕ್ಷೇತ್ರ ವಠಾರದಲ್ಲಿ ನಡೆಯಲಿದೆ.
ಯಕ್ಷಗಾನದ ಪ್ರಸಿದ್ಧ ಸ್ತ್ರೀವೇಷಧಾರಿ ಮಲ್ಲಭಾಸ್ಕರ ಅವರು ಕಾಸರಗೋಡು ಯಕ್ಷೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಸಭಾಕಾರ್ಯಕ್ರಮದಲ್ಲಿ ಪ್ರಶಸ್ತಿಪ್ರದಾನ ನಡೆಯುವುದು. ನಂತರ ನಾಟ್ಯಗುರು ರಾಕೇಶ್ ರೈ ಅಡ್ಕ ಅವರ ನಿರ್ದೇಶನದಲ್ಲಿ ಕೇಂದ್ರದ ವಿದ್ಯಾರ್ಥಿಗಳಿಂದ 'ಹರೇ ರಾಮ-ಹರೇ ಕೃಷ್ಣ' ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಮಲ್ಲ ಭಾಸ್ಕರ:
ಅಡ್ಕ ಗೋಪಾಲಕೃಷ್ಣ ಭಟ್ಟರು ಮತ್ತು ದಿವಾಣ ಶಿವಶಂಕರ ಭಟ್ಟರಿಂದ ಮಾರ್ಗದರ್ಶನ ಪಡೆದು ಯಕ್ಷರಂಗ ಪ್ರವೇಶ ಪಡೆದ ಭಾಸ್ಕರ ಅವರು ಹಲವಾರು ಪ್ರಮುಖ ಪಾತ್ರಗಲನ್ನು ನಿರ್ವಹಿಸಿದ್ದಾರೆ.ಕಿನ್ನಿಗೋಳಿಯ ಯುಗಪುರುಷ ಸಂಘಟನೆ ನೀಡುವ ದಕ್ಷಿಣ ಕನ್ನಡ- ಕಾಸರಗೋಡು ವಲಯದ ಅಮರ್ಥ ಸ್ತ್ರೀ ವೇಷಧಾರಿಗೆ ನೀಡುವ ಪ್ರಶಸ್ತಿ ಸಹಿತ ಅನೇಕ ಪುರಸ್ಕಾರಗಳು ಇವರನ್ನು ಅರಸಿಕೊಂಡು ಬಂದಿವೆ.