ಉಪ್ಪಳ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಪೈವಳಿಕೆ ಶಾಖೆಯ ಇಪ್ಪತ್ತನೇ ವಾರ್ಷಿಕ ಮಹಾಸಭೆ ಮತ್ತು ಗಣಪತಿ ಹವನ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾಯರ್ಕಟ್ಟೆಯ ಕುಲಾಲ ಸಮಾಜ ಮಂದಿರದಲ್ಲಿ ಭಾನುವಾರ ಜರಗಿತು.
ಪೈವಳಿಕೆ ಕುಲಾಲ ಸಂಘದ ಅಧ್ಯಕ್ಷ ಬಾಬು ಮೂಲ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುರುμÉೂೀತ್ತಮ ಕುಲಾಲ್ ಕಲ್ಬಾವಿ, ಡಾ ದುಗ್ಗಪ್ಪ ಕಜೆಕ್ಕಾರು, ಜಯಂತಿ ವಾಂತಿಜಾಲು, ಪುರುμÉೂೀತ್ತಮ ಕೊಲ್ಯ, ಗಣೇಶ ಕೆಟಿ, ರವೀಂದ್ರ ಮನ್ನಿಪಾಡಿ, ರಾಮಮೂಲ್ಯ ಅಂಗಡಿಮಾರು ಮುಂತಾದವರು ಮಾತನಾಡಿದರು. ಲೀಲಾವತಿ ಟೀಚರ್, ಸದಾನಂದ ಕೊಡಂದೂರು, ಆನಂದ ಪೆರ್ಮುದೆ, ಶಂಕರ ಕುಂಜತ್ತೂರು, ಬಾಲಕೃಷ್ಣ ದೀಕ್ಷ , ತಿಮ್ಮಪ್ಪ ಕುಲಾಲ್ ತೆಂಕಮಜಲು, ರಾಮ ಬಂಗೇರ ಮಿಂಜ ಕೋರಿಕ್ಕಾರ್, ಸೀನ ಮಾಸ್ತರ್, ಡಾ ಯೋಗೀಶ್, ಐತಪ್ಪ ಮಾಸ್ತರ್ ಬಂಗಲೆ, ವಿಶ್ವನಾಥ, ಶ್ರೀಧರ ಕನಿಯಾಲ ಮುಂತಾದವರು ಉಪಸ್ಥಿತರಿದ್ದರು. ರಾಮಚಂದ್ರ ಪಿಲಿಂಗುರಿ ವರದಿ ಮಂಡಿಸಿದರು. ಸದಾನಂದ ಅಮ್ಮೆರಿ ಸ್ವಾಗತಿಸಿ, ಯಶವಂತ ವಂದಿಸಿದರು. ಸಾನ್ವಿ ಚಿಪ್ಪಾರ್ ಬಳಗದವರು ಪ್ರಾರ್ಥನೆ ಹಾಡಿದರು. ಸಮಾಜದವರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಮಕ್ಕಳಿಗಾಗಿ ಪ್ರತಿಭಾ ಕಾರಂಜಿ, ನಾರಾಯಣ ಕುಲಾಲ್ ಗೂಳಿಮೂಲೆ ಇವರ ನಿರ್ದೇಶನದಲ್ಲಿ ರತಿ ಕಲ್ಯಾಣ ಎಂಬ ಯಕ್ಷಗಾನ ನಡೆಯಿತು.