ಬದಿಯಡ್ಕ :ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನೀರ್ಚಾಲು ಸನಿಹದ ರತ್ನಗಿರಿ ಕುದ್ರೆಕ್ಕಾಳಿಯಮ್ಮ ಕ್ಷೇತ್ರ ಸೇರಿದಂತೆ ಎರಡು ಕಡೆ ಸರಣಿ ಕಳವು ನಡೆದಿದೆ. ಶನಿವಾರ ಬೆಳಗ್ಗೆ ಕಳವು ಬೆಳಕಿಗೆ ಬಂದಿದ್ದು, ಆಡಳಿತ ಸಮಿತಿ ಜತೆಕಾರ್ಯದರ್ಶಿ ಉದಯಕೃಷ್ಣ ಅವರ ದೂರಿನೆ ಮೇರೆಗೆ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಮಡಿದ್ದಾರೆ. ಕುದ್ರೆಕ್ಕಾಳಿಯಮ್ಮ ಕ್ಷೇತ್ರ ಹಾಗೂ ವಿಷ್ಣುಮೂರ್ತಿ-ರಕ್ತಚಾಮುಂಡಿ ಕ್ಷೇತ್ರದ ಎದುರುಭಾಗ ನೇತುಹಾಕಲಾಗಿದ್ದ ಬೆಲೆಬಾಳುವ ತೂಗುದೀಪ ಹಾಗೂ ಘಂಟೆಗಳನ್ನು ಕಳವುಗೈದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.