ಮುಳ್ಳೇರಿಯ: ದಕ್ಷಿಣ ಭಾರತದ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆ 2025 ಮಾರ್ಚ್ 27 ರಿಂದ ಏಪ್ರಿಲ್ 7 ರವರೆಗೆ ಆಯೋಜಿಸಲಾಗಿದೆ.ಈ ಹಿನ್ನೆಲೆಯಲ್ಲಿ ನಾಡಿನಾದದ್ಯಂತ ಸಮಾರಂಭದ ಯಶಸಿಗೆ ಪ್ರಾದೇಶಿಕ ಸಮಿತಿಗಳನ್ನು ರಚಿಸಲಾಗುತ್ತಿದ್ದು, ಕೋಟೂರು ಕಾರ್ತಿಕೇಯ ಭಜನಾ ಮಂದಿರದಲ್ಲಿ ಭಾನುವಾರ ಕೋಟೂರು ಪ್ರಾದೇಶಿಕ ಸಮಿತಿ ರೂಪೀಕರಣ ಸಭೆ ಜರಗಿತು.
ಸೀತಾರಾಮ ಬಳ್ಳುಳ್ಳಾಯ ಅಧ್ಯಕ್ಷತೆ ವಹಿಸಿ ದಿಕ್ಸೂಚಿ ಮಾತುಗಳನ್ನಾಡಿದರು. ಗೋವಿಂದಬಳ್ಳಮೂಲೆ ಸಮಿತಿಯ ಕಾರ್ಯಯೋಜನೆಗಳ ಬಗ್ಗೆ ಮಾಹಿತಿಗಳನ್ನಿತ್ತರು.
ಸಭೆಯಲ್ಲಿ ಸಮಿತಿಯ ಕಾರ್ಯಕಾರಿ ಸಮಿತಿಯನ್ನು ರೂಪೀಕರಿಸಲಾಯಿತು. ನರಸಿಂಹ ಭಟ್ ಪಾತನಡ್ಕ(ಅಧ್ಯಕ್ಷ), ಪ್ರಕಾಶ ಕೋಟೂರು (ಕಾರ್ಯದರ್ಶಿ), ಸುಬ್ರಹ್ಮಣ್ಯ ಭಟ್ ಅಡ್ಕ (ಕೋಶಾಧಿಕಾರಿ) ಮತ್ತು ಸದಸ್ಯರುಗಳನ್ನು ಸಮಿತಿಗೆ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ನಿವೇದನಾಪತ್ರ ಮತ್ತು ರಶೀದಿ ಪುಸ್ತಕಗಳನ್ನು ಸಮಿತಿಯವರಿಗೆ ಹಸ್ತಾ0ತರಿಸಲಾಯಿತು.
ಮುಳಿಯಾರು ಪಂಚಾಯತಿ ಸಮಿತಿ ಸದಸ್ಯ ಮುರಳಿಕೃಷ್ಣ ಸ್ಕಂದ, ಗೋಪಾಲನ್ ಕೋಟೂರು ಮೊದಲಾದವರು ಉಪಸ್ಥಿತರಿದ್ದರು. ಪ್ರಕಾಶ್ ಕೋಟೂರು ವಂದಿಸಿದರು.