ಕಾಸರಗೋಡು: ಇರಿಯಣ್ಣಿಯಲ್ಲಿ ನವೆಂಬರ್ 2 ಮತ್ತು 3 ರಂದು ನಡೆಯಲಿರುವ 29ನೇ ರಾಜ್ಯ ರಸ್ತೆ ಸೈಕ್ಲಿಂಗ್ ಸ್ಪರ್ಧೆಯ ಲಾಂಛನವನ್ನು ಕಂದಾಯ ಸಚಿವ ಕೆ. ರಾಜನ್ ಅತಿಥಿ ಗೃಹದಲ್ಲಿ ಬಿಡುಗಡೆಗೊಳಿಸಿದರು.
ಜಿಲ್ಲೆಯಲ್ಲಿ ಮೂರನೇ ಬಾರಿಗೆ ಸ್ಪರ್ಧೆ ನಡೆಯುತ್ತಿದ್ದು, ಬೋವಿಕ್ಕಾನ-ಇರಿಯಣ್ಣಿ-ಎರಿಞÂಪುಯ ಕಿಫ್‍ಬಿ ರಸ್ತೆಯಲ್ಲಿ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಕೋಯಿಕ್ಕೋಡ್ ಮೂಲದ ಬಾಲಕೃಷ್ಣನ್ ಉಳ್ಳಿಯೇರಿ ಅವರು ಲೋಗೋವನ್ನು ವಿನ್ಯಾಸಗೊಳಿಸಿದ್ದಾರೆ. ಚಿತ್ರಕಾರ ಸಚೀಂದ್ರನ್ ಕಾರಡ್ಕ, ಚಿತ್ರರಚನಾಕಾರ ಚಂದ್ರನ್ ಮೊಟ್ಟಮ್ಮಾಳ್, ವ್ಯಂಗ್ಯಚಿತ್ರಕಾರ ಮತ್ತು ಜಿವಿಎಚ್‍ಎಸ್‍ಎಸ್ ಇರಿಯಣ್ಣಿ ಪ್ರಾಂಶುಪಾಲ ಸಚಿತ್ರನ್ ಪೆರಂಬ್ರ ಅವರನ್ನೊಳಗೊಂಡ ತೀರ್ಪುಗಾರರ ತಂಡವು ಲೋಗೋವನ್ನು ಆಯ್ಕೆ ಮಾಡಿದೆ.
ಸಮಾರಂಭದಲ್ಲಿ ಶಾಸಕ ಇಚಂದ್ರಶೇಖರನ್, ಕಾರ್ಯಾಧ್ಯಕ್ಷ ಬಿ.ಕೆ.ನಾರಾಯಣನ್, ಪ್ರಧಾನ ಸಂಚಾಲಕ ಎಂ.ಅಚ್ಯುತನ್, ಸಂಚಾಲಕ ಎಸ್.ವಿನೋದ್ ಕುಮಾರ್, ಸಜೀವನ್ ಮಡಪ್ಪರಂಬತ್, ಜತೆ ಕಾರ್ಯದರ್ಶಿಗಳಾದ ಕೆ.ಜನಾರ್ದನನ್, ಕೆ.ಸುನೀಶ್, ಉಪಾಧ್ಯಕ್ಷ ಮೂಸಾ ಪಾಲಕುನ್ನು, ಮಾಧ್ಯಮ ಸಮಿತಿ ಸಂಚಾಲಕ ರಜಿತ್ ಕಾಡಗಂ, ಅಧ್ಯಕ್ಷ ಮಧುಸೂದನನ್ ಉಪಸ್ಥಿತರಿದ್ದರು.