ಕಾಸರಗೋಡು: ಸಾರ್ವಜನಿಕ ರಜೆ ಹಿನ್ನೆಲೆಯಲ್ಲಿ ಅಕ್ಟೋಬರ್ 11 ರಂದು ಮುಂದೂಡಲ್ಪಟ್ಟಿದ್ದ ಅರಣ್ಯ ಮತ್ತು ವನ್ಯಜೀವಿ ಇಲಾಖೆಯಲ್ಲಿನ ಚಾಲಕ ಹುದ್ದೆಗೆ (ನೇರ ನೇಮಕಾತಿ ಮತ್ತು ಎನ್‍ಸಿಎ) ಕಿರು ಪಟ್ಟಿಯಲ್ಲಿ ಒಳಗೊಂಡ ಉದ್ಯೋಗಾರ್ಥಿಗಳ ದೈಹಿಕ ಕ್ಷಮತೆ ಮತ್ತು ಕ್ರೀಡಾ ಸಾಮಥ್ರ್ಯ ಪರೀಕ್ಷೆಯು ಅಕ್ಟೋಬರ್ 17 ರಂದು ಕಾಸರಗೋಡು ಸರ್ಕಾರಿ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಅಭ್ಯರ್ಥಿಗಳು ಮುಂಚಿತವಾಗಿ ಪೆÇ್ರಫೈಲ್‍ನಿಂದ ಡೌನ್‍ಲೋಡ್ ಮಾಡಿದ ಪ್ರವೇಶ ಟಿಕೆಟ್, ಮೂಲ ಗುರುತಿನ ದಾಖಲೆ, ಸಹಾಯಕ ಶಸ್ತ್ರಚಿಕಿತ್ಸಕ ಯಾ ಜೂನಿಯರ್ ಕನ್ಸಲ್ಟೆಂಟ್ ಶ್ರೇಣಿಗಿಂತ ಕಡಿಮೆಯಿಲ್ಲದ ವೈದ್ಯಕೀಯ ಅಧಿಕಾರಿಯಿಂದ ಪಡೆದ ವೈದ್ಯಕೀಯ ಪ್ರಮಾಣಪತ್ರ ಮತ್ತು ಚಾಲನಾ ಪರವಾನಗಿಯೊಂದಿಗೆ ನಿಗದಿತ ದಿನಾಂಕದಂದು ಮತ್ತು ಸಮಯಕ್ಕೆ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.