ಕಣ್ಣೂರು :ಕಣ್ಣೂರು ಎಡಿಎಂ ನವೀನ್ ಬಾಬು ಆತ್ಮಹತ್ಯೆ; ಮಲಯಾಳಪುಳ ಗ್ರಾಮ ಪಂಚಾಯಿತಿ ಹಾಗೂ ಕಣ್ಣೂರು ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ಇಂದು ಹರತಾಳ
: ಕಣ್ಣೂರು ಎಡಿಎಂ ನವೀನ್ ಬಾಬು ಅವರ ಆತ್ಮಹತ್ಯೆ ವಿರೋಧಿಸಿ ಪತ್ತನಂತಿಟ್ಟದ ಮಲಯಾಳಪುಳ ಗ್ರಾಮ ಪಂಚಾಯಿತಿಯಲ್ಲಿ ಹಾಗೂ ಕಣ್ಣೂರು ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ಇಂದು(ಬುಧವಾರ) ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಹರತಾಳಕ್ಕೆ ಕರೆ ನೀಡಿದೆ.
ಅಗತ್ಯ ಸೇವೆಗಳಿಗೆ ಹರತಾಳದಿಂದ ವಿನಾಯಿತಿ ನೀಡಲಾಗಿದೆ. ಇದೇ ವೇಳೆ ಕಣ್ಣೂರು ಜಿಲ್ಲಾಧಿಕಾರಿ ಅರುಣ್ ಕೆ ವಿಜಯನ್ ಅವರು ಕಣ್ಣೂರು ಎಡಿಎಂ ಕೆ.ನವೀನ್ ಬಾಬು ಅವರ ಸಾವಿನ ಕುರಿತು ಕಂದಾಯ ಸಚಿವರಿಗೆ ಪ್ರಾಥಮಿಕ ವರದಿ ನೀಡಿರುವರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವಿದ್ಯಾ ಅವರು ನವೀನ್‍ಬಾಬು ವಿರುದ್ಧದ ಭ್ರಷ್ಟಾಚಾರ ಆರೋಪ ಹೊರಿಸಿರುವ ಬಗ್ಗೆ ದೂರುದಾರರಿಂದ ಯಾವುದೇ ಲಿಖಿತ ದೂರು ಬಂದಿಲ್ಲ ಎಂದು ಜಿಲ್ಲಾಧಿಕಾರಿ ವರದಿಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ತನಿಖೆಯ ನಂತರ ಜಿಲ್ಲಾಧಿಕಾರಿ ಅವರು ಸಚಿವರಿಗೆ ವಿವರವಾದ ವರದಿಯನ್ನು ಸಲ್ಲಿಸಲಿದ್ದಾರೆ.