ಕಾಸರಗೋಡು: ನೀಲೇಶ್ವರ ವೀರರ್‍ಕ್ಕಾವ್ ಕಳಿಯಾಟ ಮಹೋತ್ಸವದ ಅಂಗವಾಗಿ ಪಟಾಕಿ ಸಿಡಿಸುವ ವೇಳೆ ಉಂಡಾಗಿರುವ ಅಗ್ನಿ ದುರಂತದ ಬಗ್ಗೆ ಸಮಗ್ರ ತನಿಖೆ ನಡೆಸಿ ತನಿಖಾ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೈಗಾರಿಕಾ ಖಾತೆ ಸಚಿವ ಪಿ.ರಾಜೀವ್ ತಿಳಿಸಿದ್ದಾರೆ.
ದುರಂತ ನಡೆದ ಸಥಳಕ್ಕೆ ಮಂಗಲವಾರ ಭೇಟಿ ನೀಡಿದ ಸಂದರ್ಭ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಪಟಾಕಿ ಬಳಸುವಾಗ ಅಳವಡಿಸಬೇಕಾದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು. ಶಾಸಕ ಎ.ಕೆ.ಎಂ.ಅಶ್ರಫ್, ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಮಾಜಿ ಸಂಸದ ಪಿ. ಕರುಣಾಕರನ್, ನೀಲೇಶ್ವರ ನಗರಸಭಾ ಉಪಾಧ್ಯಕ್ಷ ಪಿ.ಪಿ.ಮಹಮ್ಮದ್ ರಾಫಿ, ಕೌನ್ಸಿಲರ್ ಶಾಜೀರ್ ಮೊದಲಾದವರು ಸಚಿವರ ಜೊತೆಗಿದ್ದರು.
ಚಿತ್ರ ಮಾಹಿತಿ: ವೀರರ್‍ಕ್ಕಾವ್ ಪ್ರದೇಶಕ್ಕೆ ಸಚಿವ ಪಿ.ರಾಜೀವ್ ಮಂಗಳವಾರ ಭೇಟಿ ನೀಡಿದರು.