ಕುಂಬಳೆ: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕಾಸರಗೋಡು ಇದರ ಕೇಂದ್ರ ಸಮಿತಿಯ ವತಿಯಿಂದ ಅಧ್ಯಾಪಕರು, ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದುವ 2024 ರ ಇಲಾಖೆ ಪರೀಕ್ಷೆ ಕೆ.ಎಸ್.ಆರ್ ಮತ್ತು ಕೆ.ಇ.ಆರ್ ನ ತರಗತಿಯ ಸಮಾರೋಪ ಸಮಾರಂಭ ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯಲ್ಲಿ ನಡೆಯಿತು.
ಸತತ ಐದು ವರ್ಷಗಳಿಂದ ಕನ್ನಡ ಮಾಧ್ಯಮ ಅಧ್ಯಾಪಕರಿಗೆ ಇಲಾಖಾ ಪರೀಕ್ಷೆಯ ತರಬೇತಿ ತರಗತಿಗಳನ್ನು ಉಚಿತವಾಗಿ ಕನ್ನಡ ಅಧ್ಯಾಪಕ ಸಂಘಟನೆಯು ನೀಡುತ್ತಿದ್ದು, ಅದರಂತೆ 2024 ನೇ ಸಾಲಿನ ತರಬೇತಿ ತರಗತಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ರಾವ್ ಪಿ.ಬಿ ವಹಿಸಿದ್ದರು. ಬಡಾಜೆ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿ, ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿ ಮಾಜಿ ಕೋಶಾಧಿಕಾರಿ ಪದ್ಮಾವತಿ ಯಂ ಮುಖ್ಯ ಅತಿಥಿಯಾಗಿದ್ದರು. ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷ ಜಯರಾಮ ಸಿ.ಎಚ್, ಸಿಸ್ಟರ್ ಕ್ರಿಸ್ಟೀನಾ ಫರ್ನಾಂಡಿಸ್,ಸುರೇಖ, ನವೀನ ಕುಮಾರ್ , ಸೌಮ್ಯ ಶುಭಾಶಂಸನೆಗೈದರು. ಇಲಾಖಾ ಪರೀಕ್ಷಾ ತರಬೇತಿಯನ್ನು ಪ್ರತಿದಿನವೂ ನೀಡಿದ ಸಂಘಟನೆಯ ಅಧ್ಯಕ್ಷ ಶ್ರೀನಿವಾಸ್ ರಾವ್ ಪಿ.ಬಿ ಅವರನ್ನು ಶಿಬಿರಾರ್ಥಿಗಳು ಗೌರವಿಸಿದರು.
ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಸ್ವಾಗತಿಸಿ,. ಕುಂಬಳೆ ಹೋಲಿ ಫ್ಯಾಮಿಲಿ ಶಾಲಾ ಅಧ್ಯಾಪಕ ಸನತ್ ಕುಮಾರ್ ವಂದಿಸಿದರು.