ಕಾಸರಗೋಡು: ಕಣ್ಣೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಪುರುಷರ ಕಬಡ್ಡಿ ಚಾಂಪಿಯನ್ ಶಿಪ್‍ನಲ್ಲಿ ಕಾಸರಗೋಡು ಸರ್ಕಾರಿ ಕಾಲೇಜು ಸತತ ನಬಾಲ್ಕನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿದೆ. ಕಾಞಂಗಾಡ್ ನೆಹರು ಕಾಲೇಜು ದ್ವಿತೀಯ ಹಾಗೂ ಪೆರಿಯ ಎಸ್.ಎನ್.ಕಾಲೇಜು ತೃತೀಯ ಸ್ಥಾನ ಪಡೆದುಕೊಂಡಿತು. ಸಿಂಡಿಕೇಟ್ ಸದಸ್ಯ ಡಾ.ಎ.ಅಶೋಕನ್ ಚಾಂಪಿಯನ್‍ಶಿಪ್ ಉದ್ಘಾಟಿಸಿದರು. ಸರ್ಕಾರಿ ಕಾಲೇಜು ಕ್ರೀಡಾ ವಿಭಾಗದ ಮುಖ್ಯಸ್ಥ ಡಾ.ಅಭಿಲಾಷ್, ವಿವಿ ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಪಿ.ರಘುನಾಥ್, ಎಂ.ಸಿ.ರಾಜು ªಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ಪಟು ಜಗದೀಶ್ ಕುಂಬಳೆ ಬಹುಮಾನ ವಿತರಿಸಿದರು. ಈ ಸಂದರ್ಭ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಪಂದ್ಯಾಟಕ್ಕಾಗಿ ಕಣ್ಣೂರು ವಿಶ್ವವಿದ್ಯಾನಿಲಯ ತಂಡವನ್ನು ಆಯ್ಕೆ ಮಾಡಲಾಯಿತು.
ಕಾಸರಗೋಡು ಸರ್ಕಾರಿ ಕಾಲೇಜು ವಿದ್ಯಾರ್ಥಿಘಳಾದ ನಿವೇದ್ ನಾರಾಯಣನ್, ಕಾಶಿನಾಥ್, ರೋಹಿತ್, ಗಣೇಶ್ ಪ್ರಸಾದ್, ವಿಷ್ಣು ಸುಧಾಕರನ್, ಶರತ್, ಕಾಞಂಗಾಡು ನೆಹರೂ ಕಾಲೇಜಿನ ಆದಿತ್ಯನ್, ರಿತಿನ್, ದೇವರಾಜ್, ಪೆರಿಯಾ ಎಸ್.ಎನ್. ಕಾಲೇಜಿನ ಆದರ್ಶ್ ಭಾಸ್ಕರನ್, ರಾಜಾಪುರಂ ಸೇಂಟ್ ಪಯಸ್ ಕಾಲೇಜಿನ ಅಕ್ಷಯ್ ಮತ್ತು ಹರಿ ದೇವ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.