ಕಾಸರಗೋಡು: ಸಾಮಾಜಿಕ ನ್ಯಾಯ ಇಲಾಖೆ ಅಧಿನದಲ್ಲಿ ಚಟುವಟಿಕೆ ನಡೆಸುತ್ತಿರುವ ಕಾಸರಗೋಡು ಸರ್ಕಾರಿ ವೃದ್ಧಾಶ್ರಮದಲ್ಲಿ ವಿವಿಧ ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ. ಮಲ್ಟಿ ಟಾಸ್ಕ್ ಕೇರ್ ಪೆÇ್ರವೈಡರ್ (ಎಂಟಿಸಿಪಿ), ಹುದ್ದೆ ತೆರವಾಗಿದ್ದು, 8 ನೇ ತರಗತಿ ಉತ್ತೀರ್ಣರಾಗಿದ್ದು, 50ವರ್ಷ ವಯೋಮಿತಿಯೊಳಗಿನವರಿಗೆ ಸಂದಶನಕ್ಕೆ ಹಾಜರಾಗಬಹುದಾಗಿದೆ. ನೇಮಕಾತಿ ಒಂದು ವರ್ಷ ಕಾಲಾವಧಿಯದ್ದಾಗಿದ್ದು, ಗೌರವಧನವಾಗಿ ಮಾಸಿಕ 18390 ರೂ. ನಿಗದಿಪಡಿಸಲಾಗಿದೆ. ನವೆಂಬರ್ 5 ರಂದು ಬೆಳಗ್ಗೆ 11 ಗಂಟೆಗೆ ವೃದ್ಧಾಶ್ರಮ ಕಚೇರಿಯಲ್ಲಿ ಸಂದರ್ಶನ ನಡೆಯುವುದು.
ಜೂನಿಯರ್ ಪಬ್ಲಿಕ್ ಹೆಲ್ತ್ ನರ್ಸ್ (ಜೆಪಿಎಚ್‍ಎನ್)ಹುದ್ದೆಗಾಗಿ ಪ್ಲಸ್ ಟು, ಜೆಪಿಎಚ್‍ಎನ್ ಕೋರ್ಸ್‍ನಲ್ಲಿ ಉತ್ತೀರ್ಣರಾದ, 50ವರ್ಷದೊಳಗಿನ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.
ನೇಮಕಾತಿ ಒಂದು ವರ್ಷ ಕಾಲಾವಧಿಯಾಗಿದ್ದು, ಗೌರವಧನವಾಗಿ ಮಾಸಿಕ 24520 ರೂ. ಲಭಿಸಲಿದೆ. ನವೆಂಬರ್ 6 ರಂದು ಬೆಳಗ್ಗೆ 11ಕ್ಕೆ ಸಂದರ್ಸನ ನಡೆಯಲಿದ್ದು, ಆಸಕ್ತ ಉದ್ಯೋಗಾರ್ಥಿಗಳು ಬಯೋ ಡೇಟಾ, ಅಸಲಿ ಪ್ರಮಾಣಪತ್ರಗಳು ಮತ್ತು ಪ್ರಮಾಣಪತ್ರದ ಪ್ರತಿಗಳ ಸಹಿತ ಸರ್ಕಾರಿ ವೃದ್ಧಾಶ್ರಮದಲ್ಲಿ ಹಾಜರಾಗಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (8714619983)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.