ಕಾಸರಗೋಡು: ನಗರದ ಜನರಲ್ ಆಸ್ಪತ್ರೆಯಲ್ಲಿ ಯುವಕನೊಬ್ಬ ನಡೆಸಿದ ದಾಂಧಲೆಯಿಂದ ಇಬ್ಬರು ಸೆಕ್ಯೂರಿಟಿ ಸಿಬ್ಬಂದಿ ಗಾಯಗೊಂಡಿದ್ದಾರೆ. ನರ್ಸಿಂಗ್ ಸೂಪರಿಂಟೆಂಡೆಂಟ್ ಅವರ ಕಚೇರಿಗೆ ಅನಧಿಕೃತವಾಗಿ ಪ್ರವೇಶಿಸಿದ ಈತನನ್ನು ಹೊರಗೆ ಕಳುಹಿಸಲು ಯತ್ನಿಸಿದಾಗ ಸೆಕ್ಯೂರಿಟಿ ಸಿಬ್ಬಂದಿಗೆ ಥಳಿಸಿರುವುದಲ್ಲದೆ, ಕೈಗೆ ಕಚ್ಚಿ ಗಾಯಗೊಳಿಸಿದ್ದಾನೆ. ಈ ಸಂದರ್ಭ ಆಸ್ಪತ್ರೆ ವಠಾರದ ಪೊಲೀಸ್ ಸಹಾಯ ಕೇಂದ್ರದಲ್ಲಿ ಯಾರೂ ಪೊಲೀಸರೂ ಇರಲಿಲ್ಲ. ನಂತರ ಠಾಣೆಯಿಂದ ಪೊಲೀಸರು ತಲುಪಿ, ಯುವಕನನ್ನು ಕರೆದೊಯ್ದರೂ, ರಾತ್ರಿ ವೇಳೆ ಮತ್ತೆ ಆಗಮಿಸಿ ದಾಂಧಲೆ ನಡೆಸಿದ್ದಾನೆ. ಯುವಕನ ದಾಂಧಲೆ ಪ್ರತಿಭಟಿಸಿ ಸ್ಟಾಫ್ ಕೌನ್ಸಿಲ್ ಪದಾಧಿಕಾರಿಗೋಳು ಆಸ್ಪತ್ರೆ ವಠಾರದಲ್ಲಿ ಪ್ರತಿಭಟನೆ ನಡೆಸಿ, ಇಂತಹ ವ್ಯಕ್ತಿಗಳಿಂದ ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿದರು.