HEALTH TIPS

ಇರಾನ್-ಇಸ್ರೇಲ್ ಯುದ್ಧ ಕಾರ್ಮೋಡ; ಜಗತ್ತಿನಾದ್ಯಂತ ಷೇರುಮಾರುಕಟ್ಟೆ ತತ್ತರ; ಭಾರತ, ಚೀನಾ ಪೇಟೆಗಳಿಗೆ ರಜೆಯ ರಿಲೀಫ್

 ವಿಶ್ವದ ಹೆಚ್ಚಿನ ಷೇರು ಮಾರುಕಟ್ಟೆಗಳು ಕುಸಿತ ಕಂಡಿವೆ. ನಿನ್ನೆ ಇಸ್ರೇಲ್ ಮೇಲೆ ಇರಾನ್ ಭೀಕರ ಕ್ಷಿಪಣಿ ದಾಳಿ ನಡೆಸಿದ ಪರಿಣಾಮ ಎಂಬಂತೆ ಮಾರುಕಟ್ಟೆ ತತ್ತರಿಸಿದೆ. ಜಪಾನ್, ಸೌತ್ ಕೊರಿಯಾ, ಆಸ್ಟ್ರೇಲಿಯಾ ಮೊದಲಾದ ಮಾರುಕಟ್ಟೆಗಳ ಸೂಚ್ಯಂಕಗಳು ಹಿನ್ನಡೆ ಕಂಡಿವೆ.

ಅಮೆರಿಕದ ಮಾರುಕಟ್ಟೆಯೂ ವ್ಯತ್ಯಯಗೊಂಡಿದೆ. ಭಾರತದ ಪೇಟೆ ಗಾಂಧಿ ಜಯಂತಿ ಪ್ರಯುಕ್ತ ರಜೆ ಹೊಂದಿದೆ. ಚೀನಾದಲ್ಲಿ ಹಬ್ಬದ ಸೀಸನ್ ಆದ್ದರಿಂದ ಸತತ ರಜೆಗಳಿವೆ.

ನವದೆಹಲಿ, ಅಕ್ಟೋಬರ್ 2: ಇಸ್ರೇಲ್ ಮತ್ತು ಇರಾನ್ ಮಧ್ಯೆ ಪೂರ್ಣಪ್ರಮಾಣದ ಯುದ್ಧ ಶುರುವಾಗುವ ಭೀತಿ ಆವರಿಸಿದೆ. ಇರಾನ್ ಹಾಗೂ ಮಧ್ಯಪ್ರಾಚ್ಯ ಪ್ರದೇಶಗಳಾದ್ಯಂತ ದಾಳಿ ಮಾಡುವುದಾಗಿ ಇಸ್ರೇಲ್ ಘೋಷಿಸಿದೆ. ತನ್ನದು ಪ್ರತೀಕಾರದ ದಾಳಿ ಮಾತ್ರ. ಇದಕ್ಕೆ ಪ್ರತಿಯಾಗಿ ಮತ್ತೆ ದಾಳಿ ಮಾಡಿದರೆ ಇನ್ನೂ ಪ್ರಬಲ ಪ್ರತಿದಾಳಿ ಮಾಡುವುದಾಗಿ ಇರಾನ್ ಕೂಡ ಎಚ್ಚರಿಸಿದೆ. ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿಯಿಂದ ಆರಂಭವಾದ ದಾಳಿ ಪ್ರತಿದಾಳಿಗಳು ಈಗ ಮೂರನೇ ವಿಶ್ವ ಮಹಾಯುದ್ಧಕ್ಕೆ ನಾಂದಿ ಹಾಡುವಂತೆ ಕಾಣುತ್ತಿವೆ. ಇಸ್ರೇಲ್ ಮೇಲೆ ಇರಾನ್​ನ ನೂರಾರು ಕ್ಷಿಪಣಿಗಳ ದಾಳಿಯಾಗಿದ್ದು ಭಾರೀ ದೊಡ್ಡ ಬೆಳವಣಿಗೆ ಎನ್ನಲಾಗಿದೆ. ನಿರೀಕ್ಷೆಯಂತೆ ಇದು ಜಗತ್ತಿನ ಕಣ್ಣು ಅತ್ತ ನೆಡುವಂತೆ ಮಾಡಿದೆ. ಸಹಜವಾಗಿ ಷೇರು ಮಾರುಕಟ್ಟೆಯಲ್ಲಿ ತಲ್ಲಣದ ಛಾಯೆ ಆವರಿಸಿದೆ.

ಏಷ್ಯಾದ ಹಲವು ಮಾರುಕಟ್ಟೆಗಳು ಕಳೆಗುಂದಿವೆ. ಜಪಾನ್​ನ ನಿಕ್ಕೀ ಸೂಚ್ಯಂಕ ಶೇ. 1.5ರಷ್ಟು ಕುಸಿತ ಕಂಡಿದೆ. ಸೌತ್ ಕೊರಿಯಾದ ಕೋಸ್​ಪಿ ಸೂಚ್ಯಂಕ 1.3 ಪ್ರತಿಶತದಷ್ಟು ನಷ್ಟ ಕಂಡರೆ, ಆಸ್ಟ್ರೇಲಿಯಾದ ಸೂಚ್ಯಂಕವೂ ಹಿನ್ನಡೆ ಕಂಡಿದೆ.

ಅಮೆರಿಕದ ಎಸ್ ಅಂಡ್ ಪಿ 500 ಸ್ಟಾಕ್ ಇಂಡೆಕ್ಸ್ ಫ್ಯೂಚರ್ಸ್​ನಲ್ಲಿ ಕುಸಿತ ಮುಂದುವರಿದಿದೆ. ಎಂಎಸ್​ಸಿಐನ ಏಷ್ಯಾ ಪೆಸಿಫಿಕ್ ಇಂಡೆಕ್ಸ್ ಕೂಡ ಇಳಿಕೆ ಕಂಡಿದೆ. ಇವೆಲ್ಲವೂ ಮಧ್ಯಪ್ರಾಚ್ಯ ಬಿಕ್ಕಟ್ಟಿನ ಪರಿಣಾಮ ಎಂದು ಹೇಳಲಾಗದು. ಸ್ವಲ್ಪ ಮಟ್ಟಿಗಾದರೂ ಹೂಡಿಕೆದಾರರನ್ನು ಭೀತಿಗೊಳಿಸಿರಬಹುದು.

ಹಾಂಕಾಂಗ್ ಮಾರುಕಟ್ಟೆ ಚೇತರಿಕೆ

ಏಷ್ಯಾದ ಮಾರುಕಟ್ಟೆಗಳು ಹಿನ್ನಡೆ ಕಾಣುತ್ತಿರುವ ಹೊತ್ತಲ್ಲೇ ಹಾಂಕಾಂಗ್​ನ ಹ್ಯಾಂಗ್ ಸೆಂಗ್ ಇಂಡೆಕ್ಸ್ ಹೊಳೆಯುತ್ತಿದೆ. ಇಂದು ಬುಧವಾರ ಶೇ. 2.3ರಷ್ಟು ಹೆಚ್ಚಳ ಕಂಡಿದೆ. ಚೀನಾದ ಆರ್ಥಿಕತೆಗೆ ಪುಷ್ಟಿ ಕೊಡಲು ಅಲ್ಲಿನ ಸರ್ಕಾರ ತೆಗೆದುಕೊಂಡ ಕ್ರಮಗಳ ಪರಿಣಾಮ ಹಾಂಕಾಂಗ್ ಮಾರುಕಟ್ಟೆ ಮೇಲಾಗುತ್ತಿದೆ.

ಕಳೆದ ಕೆಲ ದಿನಗಳಿಂದ ಅದ್ಭುತವಾಗಿ ಬೆಳೆಯುತ್ತಿರುವ ಚೀನಾದ ಷೇರು ಮಾರುಕಟ್ಟೆಗೆ ಈಗ ಸಾಲಸಾಲು ರಜಾದಿನಗಳಿವೆ. ಹಬ್ಬದ ಸೀಸನ್ ಆದ್ದರಿಂದ ಸತತವಾಗಿ ರಜೆ ಇದೆ.

ಇತ್ತ, ಭಾರತದಲ್ಲಿ ನಿನ್ನೆ ಮಂಗಳವಾರ ಅಲ್ಪ ಕುಸಿತ ಕಂಡಿದ್ದ ಷೇರುಮಾರುಕಟ್ಟೆಗೆ ಇಂದು ಗಾಂಧಿ ಜಯಂತಿ ನಿಮಿತ್ತ ರಜೆ ಇದೆ. ನಾಳೆಯೂ ಕುಸಿತ ಮುಂದುವರಿಯುವ ಸಾಧ್ಯತೆ ಕಾಣುತ್ತಿದೆ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries