HEALTH TIPS

ನಿಮ್ಮ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸೋಕೆ ಕಷ್ಟ ಪಡ್ತಿದ್ದೀರಾ? ಹಾಗಾದ್ರೆ ಈ ಟ್ರಿಕ್ಸ್ ಫಾಲೋ ಮಾಡಿ

 ಧಾರ್ ಕಾರ್ಡ್‌ (Aadhaar Card) ಇಂದಿನ ದಿನಗಳಲ್ಲಿ ಬಹಳ ಮುಖ್ಯವಾದದ್ದು. ನೆನಪಿರಲಿ ನಿಮ್ಮ 12 ಅಂಕಿಯ ಆಧಾರ್ ನಂಬರ್‌ಗೆ (Aadhaar Number) ತುಂಬಾ ಮಹತ್ವವಿದೆ. ಇದು ನಿಮ್ಮ ಹೆಸರು, ವಿಳಾಸ (Address) ಮತ್ತು ಫಿಂಗರ್‌ಪ್ರಿಂಟ್‌ನಂತಹ ವಿವರಗಳನ್ನು ಒಳಗೊಂಡಿರುತ್ತದೆ.

ಆಧಾರ್ ಕಾರ್ಡ್ ಇಲ್ಲದೆ ನೀವು ಸರ್ಕಾರದ (Government) ಯಾವುದೇ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ. ಗ್ಯಾಸ್ ಸಂಪರ್ಕದಿಂದ ಹಿಡಿದು ಇತರ ಅನೇಕ ಸಬ್ಸಿಡಿಗಳನ್ನು ಪಡೆಯಲು ಆಧಾರ್ ಅನ್ನು ಬಳಸಲಾಗುತ್ತದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಶಾಲಾ ಪ್ರವೇಶ ಪಡೆಯುವವರೆಗೆ ಆಧಾರ್ ಕಾರ್ಡ್ ಬೇಕು. ಇನ್ನು ಚಿಕ್ಕ ಮಕ್ಕಳ ಆಧಾರ್ ಕಾರ್ಡ್‌ ಹೇಗೆ ಮಾಡಿಸುವುದು ಎಂಬುದರ ಬಗ್ಗೆ ಮಾಹಿತಿ ಇದ್ಯಾ? ಇದರ ಬಗ್ಗೆ ಒಂದಿಷ್ಟು ಮಾಹಿತಿ ಪಡೆಯೋಣ ಬನ್ನಿ.

ನಮ್ಮ ಆಧಾರ್ ನಮ್ಮ ಗುರುತು…

ಸದ್ಯದ ಪರಿಸ್ಥಿತಿ ಹೇಗಿದೆ ಅಂದರೆ ನಮಗೆ ಯಾವ ಕೆಲಸ ಆಗಬೇಕಾದರೂ ಆಡ್ರೆಸ್ ಪ್ರೂಫ್ಗೆ ಆಧಾರ್ ಕಾರ್ಡ್ ತುಂಬಾ ಅವಶ್ಯಕ. ಸರ್ಕಾರ ತನ್ನ ಯೋಜನೆಗಳ ಲಾಭ ಪಡೆಯಲು ಈಗ ಆಧಾರ್ ಕಾರ್ಡ್ ಕಡ್ಡಾಯ ಮಾಡಿದೆ. ಈ ಕಾರ್ಡ್‌ನಲ್ಲಿ ಪೂರ್ಣ ಹೆಸರು, ಶಾಶ್ವತ ವಿಳಾಸ ಮತ್ತು ಜನ್ಮ ದಿನಾಂಕದಂತಹ ಪ್ರಮುಖ ವಿವರಗಳನ್ನು ಒಳಗೊಂಡಿರುತ್ತದೆ. ಇನ್ನು ಇದನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡಿದೆ. ನಮ್ಮ ಈ ಆಧಾರ್ ಕಾರ್ಡ್‌ಗೆ ಎಲ್ಲೆಡೆ ಮಾನ್ಯತೆ ಇದೆ.

ಚಿಕ್ಕ ಮಕ್ಕಳಿಗೂ ಆಧಾರ್ ಕಾರ್ಡ್‌!

ಸಾಮಾನ್ಯವಾಗಿ ವಯಸ್ಕರರು ಆಧಾರ್‌ ಕಾರ್ಡ್‌ನ್ನು ಬಹಳ ಸರಳವಾಗಿ ಮಾಡಿಸಿಕೊಂಡು ಬಿಡುತ್ತಾರೆ. ಆದರೆ ಚಿಕ್ಕ ಮಕ್ಕಳಿಗೆ ಆಧಾರ ಕಾರ್ಡ್ ಮಾಡಿಸುವುದು ಹೇಗೆ ಎಂದು ನಿಮಗೆ ಗೊತ್ತಾ? ಈ ಕುರಿತು ನಿಮಗೆ ಸ್ವಲ್ಪ ಗೊಂದಲ ಇರಬಹುದು. ಇನ್ನು ಶಿಶು ಆಧಾರ್ ಕಾರ್ಡ್ ಮಾಡಿಸುವುದು ಹೇಗೆ ಎಂಬುದರ ಬಗ್ಗೆ ನಾವು ನಿಮಗೆ ಒಂದಿಷ್ಟು ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

ನೀವು ಬಾಲ್‌ ಆಧಾರ್ ಕಾರ್ಡ್‌ ಅಥವಾ ಶಿಶು ಆಧಾರ್ ಕಾರ್ಡ್‌ಗಾಗಿ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. UIDAI ನಿಯಮಗಳ ಪ್ರಕಾರ, ಅಪ್ರಾಪ್ತ ವಯಸ್ಕರಿಗೆ ಅಥವಾ ಇತ್ತೀಚೆಗೆ ಜನಿಸಿದವರ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ಯಾವುದೇ ಬಯೋಮೆಟ್ರಿಕ್ ಮಾಡಲಾಗುವುದಿಲ್ಲ. ನವಜಾತ ಶಿಶುವಿಗೆ ಆಧಾರ್ ಕಾರ್ಡ್ ನೀಡುವಾಗ UID ಅನ್ನು ಜನಸಂಖ್ಯಾ ವಿವರಗಳ ಮೇಲೆ ನೀಡಲಾಗುತ್ತದೆ. ಮಕ್ಕಳ ಪೋಷಕರ UID ಯೊಂದಿಗೆ ಲಿಂಕ್ ಮಾಡಲಾಗುತ್ತದೆ. ನೆನಪಿರಲಿ ನವಜಾತ ಶಿಶುವಿಗೆ 5 ವರ್ಷ ತುಂಬಿದ ನಂತರ, ಅದರ 10 ಬೆರಳಿನ ಬಯೋಮೆಟ್ರಿಕ್ ಮಾಡಲಾಗುತ್ತದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ

  1. ಮೊದಲು uidai.govinಗೆ ಲಾಗ್ ಇನ್ ಆಗಬೇಕು.

  2. ಆಧಾರ್ ಕಾರ್ಡ್ ನೋಂದಣಿ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

  3. ಮಗವಿನ ಹೆಸರು, ಪೋಷಕರ ಫೋನ್ ನಂಬರ್, ಇ-ಮೇಲ್ ಐಡಿ ಮತ್ತು ಇತರ ವೈಯಕ್ತಿಕ ಮಾಹಿತಿಗಳನ್ನು ನಮೂದಿಸಬೇಕು.

  4. ನವಜಾತ ಶಿಶುವಿಗೆ ಸಂಬಂಧಿಸಿದ ವಿಳಾಸ, ಜಿಲ್ಲೆ ರಾಜ್ಯ ಮತ್ತು ಇತರ ಮಾಹಿತಿಗಳನ್ನು ಭರ್ತಿ ಮಾಡಬೇಕು.

  5. ನಂತರ Fix Appointment ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

  6. ಆಧಾರ್ ಕಾರ್ಡ್ ನೋಂದಣಿಗೆ ದಿನಾಂಕ ನಿಗದಿ ಮಾಡಿಕೊಳ್ಳಬೇಕು.

  7. ಮುಂದಿನ ಹಂತಕ್ಕಾಗಿ ಹತ್ತಿರದ ಆಧಾರ್ ನೋಂದಣಿ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬೇಕು.

ಒಂದು ವೇಳೆ ನೀವು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಚ್ಛಿಸಿದರೆ ನೀವು ನಿಮ್ಮ ಹತ್ತಿರವಿರುವ ಆಧಾರ್‌ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ. ಶಿಶು ಆಧಾರ್‌ ಕಾರ್ಡ್‌ ಮಾಡಿಸುವಾಗ ಬಹಳ ಮುಖ್ಯವಾಗಿ ಪೋಷಕರು ಮಗುವಿನ ಜನನ ದಿನಾಂಕವನ್ನು ಸರಿಯಾಗಿ ಪರೀಕ್ಷಿಸಿಕೊಳ್ಳಬೇಕು. ಏಕೆಂದರೆ, ಇದನ್ನು ತಿದ್ದುಪಡಿ ಅಥವಾ ಅಪ್‌ಡೇಟ್ ಮಾಡಲು ಸಾಧ್ಯವಿರುವುದು ಒಮ್ಮೆ ಮಾತ್ರ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries