ನವದೆಹಲಿ: ಭಾರತ ಸರ್ಕಾರದ ಏಜೆಂಟರ್‌ಗಳು ಖಲಿಸ್ತಾನಿ ವಿಚಾರದಲ್ಲಿ ಅಪರಾಧಿಗಳನ್ನು ಬಳಕೆಮಾಡುತ್ತಾರೆ. ಪ್ರಮುಖವಾಗಿ ಬಿಷ್ಣೋಯಿ ಗ್ಯಾಂಗ್ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಕೆನಡಾ ಹೇಳಿದೆ ಎಂದು ವರದಿಯಾಗಿದೆ.
ನವದೆಹಲಿ: ಭಾರತ ಸರ್ಕಾರದ ಏಜೆಂಟರ್‌ಗಳು ಖಲಿಸ್ತಾನಿ ವಿಚಾರದಲ್ಲಿ ಅಪರಾಧಿಗಳನ್ನು ಬಳಕೆಮಾಡುತ್ತಾರೆ. ಪ್ರಮುಖವಾಗಿ ಬಿಷ್ಣೋಯಿ ಗ್ಯಾಂಗ್ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಕೆನಡಾ ಹೇಳಿದೆ ಎಂದು ವರದಿಯಾಗಿದೆ.
ಕೆನಡಾದಲ್ಲಿರುವ ತನ್ನ ಹೈಕಮಿಷನರ್ ಅವರನ್ನು ವಾಪಸ್ ಕರೆಸಿಕೊಳ್ಳುವುದಾಗಿ ಭಾರತ ಸೋಮವಾರ ಘೋಷಣೆ ಮಾಡಿದ ಬೆನ್ನಲ್ಲೇ ಈ ಹೇಳಿಕೆ ಹೊರ ಬಿದ್ದಿದೆ.
ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ ದಲ್ಲಿ ಭಾರತದ ಹೈಕಮಿಷನರ್ ಮತ್ತು ಇತರ ರಾಜತಾಂತ್ರಿಕ ಅಧಿಕಾರಿಗಳನ್ನೂ ತನಿಖೆಗೆ ಒಳಪಡಿಸುವುದಾಗಿ ಕೆನಡಾ ಸರ್ಕಾರ ಹೇಳಿದೆ. ಅದರ ಬೆನ್ನಲ್ಲೇ ಭಾರತ ಈ ನಿರ್ಧಾರ ತೆಗೆದುಕೊಂಡಿದೆ.
ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟ್‌ಗಳ ಪಾತ್ರವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಈ ಹಿಂದೆ ಆರೋಪಿಸಿದ ನಂತರ, ಭಾರತ ಮತ್ತು ಕೆನಡಾ ನಡುವಿನ ಸಂಬಂಧ ತೀವ್ರ ಬಿಗಡಾಯಿಸಿತ್ತು.
'ನಮ್ಮ ರಾಜತಾಂತ್ರಿಕ ಅಧಿಕಾರಿಗಳ ಭದ್ರತೆಯ ಖಾತರಿಯನ್ನು ಈಗಿನ ಕೆನಡಾ ಸರ್ಕಾರ ನೀಡಬಹುದು ಎಂಬ ನಂಬಿಕೆಯಿಲ್ಲ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಟಣೆ ತಿಳಿಸಿದೆ. 'ಆದ್ದರಿಂದ, ಹೈಕಮಿಷನರ್ ಮತ್ತು ಕೆನಡಾ ಗುರಿಯಾಗಿಸಿಕೊಂಡಿರುವ ಇತರ ರಾಜತಾಂತ್ರಿಕ ಅಧಿಕಾರಿ ಗಳನ್ನು ವಾಪಸ್ ಕರೆಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ' ಎಂದು ಹೇಳಿದೆ.