HEALTH TIPS

ಕಾಸರಗೋಡಿನ ಜನಪ್ರಿಯ ವೈದ್ಯ ಡಾ. ಬಿ. ನಾರಾಯಣ ನಾಯ್ಕ್ ಅವರಿಗೆ ಐ.ಎಂ.ಎ. ರಾಜ್ಯ ಪ್ರಶಸ್ತಿ- ನಿರಂತರ ಚಟುವಟಿಕೆಯ ದಣಿವರಿಯದ ಸಂಘಟನಾ ಸಾರಥಿಗೆ ರಾಜ್ಯ ಘಟಕದ ಅಂಗೀಕಾರ

ಕಾಸರಗೋಡು : ಕಾಸರಗೋಡಿನಲ್ಲಿ ವೈದ್ಯಕೀಯ ಸಂಘಟನಾ ರಂಗದಲ್ಲಿ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಜನಪ್ರಿಯ ವೈದ್ಯ,  ಐಎಂಎ ಕಾಸರಗೋಡು ಜಿಲ್ಲಾ ಸಂಚಾಲಕ ಡಾ. ಬಿ ನಾರಾಯಣ ನಾಯ್ಕ್ ಅವರನ್ನು ಗುರುತಿಸಿ ಐ.ಎಂ.ಎ ಕೇರಳ ರಾಜ್ಯ ಘಟಕ ರಾಜ್ಯ ಪ್ರಶಸ್ತಿ ಘೋಷಿಸಿದೆ.

ಐ. ಎಂ. ಎ ಕೇರಳ ರಾಜ್ಯ ಘಟಕದ ಅತ್ಯುತ್ತಮ  ouಣ sಣಚಿಟಿಜiಟಿg ಟeಚಿಜeಡಿshiಠಿ ಂತಿಚಿಡಿಜ 2023-24 ಇದಾಗಿದ್ದು,  ಮುಂಬರುವ ನವಂಬರ್ 9ರಂದು ತ್ರಿಶ್ಶೂರಿನಲ್ಲಿ ಐ. ಎಂ.  ಎ ಕಾನ್ಫೆರೆನ್ಸ್ ಭವನದಲ್ಲಿ ಐ ಎಂ ಎ ರಾಜ್ಯ ಸಮ್ಮೇಳನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ.

ಎಣ್ಮಕಜೆ ಪಂಚಾಯತಿನ ಏಳ್ಕಾನ ಬಾಳೆಗುಳಿ ದಿ. ರಾಮನಾಯ್ಕ್ - ದಿ.  ಲಕ್ಷ್ಮಿ ಅವರ ಪುತ್ರನಾದ ನಾರಾಯಣ ನಾಯ್ಕರು 1993ರಲ್ಲಿ ಕೇರಳ ಸರಕಾರಿ ಆರೋಗ್ಯ ಇಲಾಖೆಗೆ ಸೇರ್ಪಡೆಗೊಂಡರು. ಕಾಸರಗೋಡಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದುಡಿದು,  ಪದೋನ್ನತಿಯೊಂದಿಗೆ 2008ರಲ್ಲಿ ಕಾಸರಗೋಡು ಸರಕಾರಿ ಆಸ್ಪತ್ರೆಯ ಮಕ್ಕಳ ವಿಭಾಗಕ್ಕೆ ಮುಖ್ಯಸ್ಥರಾಗಿ ನೇಮಕಗೊಂಡು 2022ರ ಡಿ. 31ರಂದು ಸೀನಿಯರ್ ಪೀಡಿಯಾಟ್ರಿಕ್ ಕನ್ಸಲ್ಟಂಟ್ ಸೇವೆಯೊಂದಿಗೆ ನಿವೃತ್ತರಾದರು.

ಸೃಜನಶೀಲ,  ಕ್ರಿಯಾಶೀಲ ವ್ಯಕ್ತಿಗೆ ನಿವೃತ್ತಿ ಇಲ್ಲ ಎಂಬುದರ ಪ್ರತೀಕವಾದ ಇವರು ಖಾಸಗಿಯಾಗಿ ಕಾಸರಗೋಡಿನಲ್ಲಿ ಮಕ್ಕಳ ತಜ್ಞರಾಗಿ ನಾಡಿನ ಜನರೆಲ್ಲರಿಗೆ ಪ್ರಿಯ ವೈದ್ಯ. ತನ್ನ ಅಧಿಕ ಸಮಯವನ್ನೂ ಸಂಘಟನೆ,  ಸಮಾಜಕ್ಕೆ ಮೀಸಲಿರಿಸಿ ಚಟುವಟಿಕೆಯಲ್ಲೇ ಮಗ್ನರಾಗುವ ಅವರು ಕಾಸರಗೋಡು ಐ ಎಂ ಎ ಘಟಕವನ್ನು ಎತ್ತರಕ್ಕೇರಿಸಿ ಬಲಿಷ್ಠಗೊಳಿಸಿದವರು.  ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಮುಡಿದವರು.  ವೈದ್ಯಕೀಯ ಸಂಬಂಧವಾದ ಹಲವು ಹಂಘಟನೆಗಳ ಸಾರಥಿಯಾದ ಅವರು ಪ್ರಸ್ತತ

ಐ. ಎಂ. ಎ ಕಾಸರಗೋಡು ಜಿಲ್ಲಾ ಸಂಚಾಲಕ.  ,ರೋಟರಿ ಸಂಸ್ಥೆಗಳ ಸಾರಥಿ.  ಅನೇಕ ತರಬೇತಿ,  ಉಪನ್ಯಾಸಗಳಿಗೆ ಸಂಪನ್ಮೂಲ ವ್ಯಕ್ತಿಯಾದ ಡಾ.  ನಾಯ್ಕ್ ಅವರು ಸಮಾಜಿಕ, ಸಂಘಟನಾ ರಂಗದಲ್ಲಿ ದಣಿವರಿಯದ ದುಡಿಮೆಯ ಸಾಧಕ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries