HEALTH TIPS

ಇಪಿಎಫ್ಒ ಅಧಿಕಾರಿಗಳನ್ನು ಭೇಟಿ ಮಾಡಿ ಸಭೆ ನಡೆಸಿದ ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವ್ಯ

ತಿರುವನಂತಪುರ: ಕೇಂದ್ರ ಕಾರ್ಮಿಕ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವ್ಯ ಅವರು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್ಒ) ತಿರುವನಂತಪುರ ಪಟ್ಟಾದಲ್ಲಿರುವ ವಲಯ ಕಚೇರಿಗೆ ಇಂದು ಭೇಟಿ ನೀಡಿದರು.

ಮನ್ಸುಖ್ ಮಾಂಡವ್ಯ ಅವರು ಕೇರಳದ ಇಪಿಎಫ್‍ಒ, ಇಎಸ್‍ಐಸಿ ಮತ್ತು ಸಿಎಲ್‍ಸಿಯ ಹಿರಿಯ ಅಧಿಕಾರಿಗಳೊಂದಿಗೆ ಭೇಟಿಯ ಸಂದರ್ಭದಲ್ಲಿ ಸಂವಾದ ನಡೆಸಿದರು. ಕೇಂದ್ರ ಸಚಿವರು ಇPಈಔ, ಇSIಅ ಮತ್ತು ಅಐಅ ಕಚೇರಿಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು. ಇಪಿಎಫ್‍ಒದ ಐಟಿ ವ್ಯವಸ್ಥೆಯನ್ನು ಹೆಚ್ಚು ದೃಢವಾಗಿ ಮತ್ತು ವಿಶ್ವದ ಅತ್ಯುತ್ತಮ ವ್ಯವಸ್ಥೆಗೆ ಹೋಲಿಸುವ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು. ಮನ್ಸುಖ್ ಮಾಂಡವ್ಯ  ಅವರು ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ಹೆಚ್ಚಿಸುವ ಮತ್ತು ಇಪಿಎಫ್ಒ ಚಂದಾದಾರರಿಗೆ ಉತ್ತಮ ಸೇವೆಗಳನ್ನು ಒದಗಿಸುವ ಅಗತ್ಯವನ್ನು ಒತ್ತಿ ಹೇಳಿದರು.

ಮೈಭಾರತ್‍ನ ಸ್ವಯಂಸೇವಕರ ಸೇವೆಯನ್ನು ಜೀವನ ಪ್ರಮಾಣಪತ್ರಗಳನ್ನು ಸಂಗ್ರಹಿಸಲು ಬಳಸಬಹುದು ಎಂದು ಸಚಿವರು ಸಲಹೆ ನೀಡಿದರು.

ಇಎಸ್‍ಐ ವಿಮಾದಾರರು ಇಎಸ್‍ಐ ಡಿಸ್ಪೆನ್ಸರಿಗಳಿಗೆ ಭೇಟಿ ನೀಡದೆ ಆನ್‍ಲೈನ್ ಕ್ಲೈಮ್ ಫೈಲಿಂಗ್ ವ್ಯವಸ್ಥೆಯ ಮೂಲಕ ಅನಾರೋಗ್ಯ ರಜೆಯಂತಹ ಪ್ರಯೋಜನಗಳನ್ನು ಪಡೆಯಬೇಕು ಎಂದು ಅವರು ಸಲಹೆ ನೀಡಿದರು.

ಸಭೆಯಲ್ಲಿ, ಕೇಂದ್ರೀಯ ಪಿಎಫ್ ಕಮಿಷನರ್ ಮುಖೇಶ್ ಕುಮಾರ್, ಪ್ರಾದೇಶಿಕ ನಿರ್ದೇಶಕ (ಐ/ಸಿ), ಎಸ್. ಶಂಕರ್, ಪ್ರಾದೇಶಿಕ ಕಾರ್ಮಿಕ ಆಯುಕ್ತ ರೋಹಿತ್ ಮಣಿ ತಿವಾರಿ ಮತ್ತು ಕೇರಳ ಕಾರ್ಮಿಕ ಸಚಿವಾಲಯದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries