ಮಂಜೇಶ್ವರ: ರಾಷ್ಟ್ರಪಿತ ಮೋಹನ್ ದಾಸ್ ಕರಮಚಂದ ಗಾಂಧೀಜಿಯವರ 155 ಜನ್ಮ ದಿನಾಚರಣೆ ಹಾಗೂ ಮಾಜಿ ಪ್ರಧಾನಿ ಲಾಲ್ ಬಹುದೂರ್ ಶಾಸ್ತ್ರಿಯವರ 120 ನೇ ಜನ್ಮದಿನಾಚರಣೆಯ ಪ್ರಯುಕ್ತ ಕುಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.
ಆ ಪ್ರಯುಕ್ತ ಕುಳೂರು ವಾರ್ಡಿನ ಪ್ರಥಮ ಪ್ರಜೆ ಜನಾರ್ದನ ಪೂಜಾರಿ ಕುಳೂರು ಹಾಗೂ ಶಾಲಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ ಅವರು ಈ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು. ವ್ಯವಸ್ಥಾಪನಾ ಸಮಿತಿ ಉಪಾಧ್ಯಕ್ಷರಾದ ಸತೀಶ್ ಎಲಿಯಾಣ, ಕಾರ್ಯಕಾರಿ ಸಮಿತಿ ಸದಸ್ಯರಾದ ಕವಿತಾ, ಶಾಲಾ ಮುಖ್ಯ ಶಿಕ್ಷಕಿ ಮಾಲತಿ ಹಾಗೂ ಶಿಕ್ಷಕ ವೃಂದ, ಜಲಜ ಪೆÇಯ್ಯೇಲು ಜೊತೆಗಿದ್ದರು. ಕುಳೂರು ಗ್ರಾಮದ ಉದ್ಯೋಗ ಖಾತರಿ ಯೋಜನೆಯ ತಂಡವಾದ ಜೀವ ರಕ್ಷಾ ತಂಡಡ ಸುಚಿತ್ರಾ ಕರಿಪ್ಪಾರ್ ಹಾಗೂ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಚಿಕ್ಕಪ್ಪ ಶೆಟ್ಟಿ ಹಾಗೂ ಮಜೀದ್ ಸಾಹೇಬ್ ಶಾಲಾ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಗಳಾದರು. ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರಿಗೆ ಪುಷ್ಪ ನಮನ ಸಲ್ಲಿಸಲಾಯಿತು.