ಕಾಸರಗೋಡು: ರಾಜ್ಯ ಮಹಿಳಾ ಆಯೋಗದ ಸದಸ್ಯೆ ನ್ಯಾಯವಾದಿ. ಪಿ.ಕುಂಞÂ್ಞ ಆಯಿಶಾ. ಕಾಸರಗೋಡು ಕಲೆಕ್ಟರೇಟ್ ಕಾನ್ಫರೆನ್ಸ್ ಹಾಲ್ ನಲ್ಲಿ ಮಹಿಳಾ ಆಯೋಗದ ಸಭಾಭವನದ ನಡೆದ ಅದಾಲತ್ ನಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಮಹಿಳೆಯರ ಸಮಸ್ಯೆಗಳನ್ನು ಕೀಳಾಗಿ ಪರಿಗಣಿಸಬಾರದು ಎಂದು ತಿಳಿಸಿದರು.
ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ, ರಸ್ತೆ ವಿವಾದ, ಆಸ್ತಿ ವಿವಾದ ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದ ದೂರುಗಳು ಆಯೋಗದ ಮುಂದೆ ಬಂದಿದ್ದವು. ಮಹಿಳೆಯರ ಸಮಸ್ಯೆಗಳನ್ನು ಸಾಮಾನ್ಯೀಕರಿಸುವ ಪ್ರವೃತ್ತಿ ಸಮಾಜದಲ್ಲಿದೆ ಇದಕ್ಕೆ ಕ್ಲಪ್ತ ಸಮಯಕ್ಕೆ ಪರಿಹಾರ ಕಲ್ಪಿಸಬೇಕು ಎಂದರು.
ಸ್ನೇಹವನ್ನು ದುರ್ಬಳಕೆ ಮಾಡಿಕೊಂಡು ಅವರ ಮೂಲಕ ಆರ್ಥಿಕ ವಹಿವಾಟು ನಡೆಸುತ್ತಿದ್ದು, ಸಂಕೀರ್ಣ ಸಮಸ್ಯೆಗಳಿಗೆ ಕಾರಣವಾಗಿರುವ ಬಗ್ಗೆಯೂ ಆಯೋಗದ ಮುಂದೆ ದೂರುಗಳನ್ನು ತರಲಾಗಿತ್ತು. ಖಾಸಗಿ ಸಂಸ್ಥೆಗಳಲ್ಲಿ ಸರಿಯಾದ ನಿಯಮಾವಳಿಗಳನ್ನು ಅನುಸರಿಸದೆ ನೌಕರರನ್ನು ಕೆಲಸದಿಂದ ತೆಗೆಯುವ ಪ್ರವೃತ್ತಿಯೂ ಹೆಚ್ಚುತ್ತಿದೆ. ವಿದ್ಯಾವಂತ ಮಹಿಳೆಯರಿಗೂ ಸಂಸ್ಥೆಗಳಲ್ಲಿನ ಆಂತರಿಕ ದೂರು ಪರಿಹಾರ ಸಮಿತಿಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಜಾಗೃತ ಸಮಿತಿಗಳ ಬಗ್ಗೆ ಜ್ಞಾನದ ಕೊರತೆಯಿದೆ. ಆಯೋಗದ ವಿವಿಧ ಜಾಗೃತಿ ತರಗತಿಗಳು ಹಾಗೂ ಚಟುವಟಿಕೆಗಳು ಮುಂದುವರಿದಿವೆ ಎಂದು ಆಯೋಗದ ಸದಸ್ಯರು ತಿಳಿಸಿದರು.
ಕಾಸರಗೋಡು ಕಲೆಕ್ಟರೇಟ್ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ 43 ದೂರುಗಳನ್ನು ಪರಿಗಣಿಸಲಾಯಿತು. 13 ಕಡತಗಳು ಇತ್ಯರ್ಥವಾಗಿವೆ. 30 ಕಡತಗಳನ್ನು ಅದಾಲತ್ ನಲ್ಲಿ ಮುಕ್ತಾಯಗೊಳಿಸಲಾಯಿತು. ಮಹಿಳಾ ಸೆಲ್ ಎಎಸ್‍ಐ ಶೈಲಜಾ, ಮಹಿಳಾ ಸೆಲ್ ಸಿಪಿಒ ಅಮೃತಾ, ಮಹಿಳಾ ಆಯೋಗದ ಎಸ್‍ಐ ಮಿನಿ ಮೋಲ್, ರಮ್ಯಾ ಮೋಳ್, ವಕೀಲೆ ಇಂದಿರಾ ಮತ್ತಿತರರು ಭಾಗವಹಿಸಿದ್ದರು.