ಕುಂಬಳೆ: ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್‍ನ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಬ್ಯಾಂಕ್‍ನ ಸೂರಂಬೈಲು ಪ್ರಧಾನ ಕಚೇರಿಯ ಸಮನ್ವಯ ಸಭಾಂಗಣದಲ್ಲಿ ಜರಗಿತು. ಬ್ಯಾಂಕ್ ಅಧ್ಯಕ್ಷ ಜಯಂತ ಪಾಟಾಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಹಕರು ಹಾಗೂ ಬ್ಯಾಂಕ್ ಪರಸ್ಪರ ಹೊಂದಾಣಿಕೆಯಿಂದ ಮುಂದುವರಿದಾಗ ಎಲ್ಲರಿಗೂ ಅನುಕೂಲವಾಗುತ್ತದೆ.ಬ್ಯಾಂಕ್‍ನ ಪ್ರಗತಿಗೆ ಗ್ರಾಹಕರ ಸಹಕಾರ ಅತೀಅಗತ್ಯ ಎಂದರು.
ಕಾರ್ಯದರ್ಶಿ ಶ್ರೀಕೃಷ್ಣ ಭಟ್ ವಾರ್ಷಿಕ ವರದಿ ಹಾಗೂ ಆಯವ್ಯಯ ಮಂಡಿಸಿದರು. ಈ ಸಂದರ್ಭದಲ್ಲಿ ಸದ್ಯಸ್ಯರ ಮಕ್ಕಳಿಗೆ ನೀಡುವ ಎಸ್‍ಎಸ್‍ಎಲ್‍ಸಿಯಲ್ಲಿ ಎಲ್ಲಾ ವಿಷಯದಲ್ಲಿ ಎಪ್ಲಸ್ ಪಡೆದ ವಿದ್ಯಾರ್ಥಿಗಳಿಗೆ ನಗದು ಸಹಿತ ಶಾಶ್ವತ ಫಲಕ ನೀಡಿ ಅಭಿನಂದಿಸಲಾಯಿತು. ಉಪಾಧ್ಯಕ್ಷ ಶ್ಯಾಮರಾಜ್ ದೊಡ್ಡಮಾಣಿ ಸ್ವಾಗತಿಸಿ, ನಿರ್ದೇಶಕಿ ಶಶಿಕಲಾ ವಂದಿಸಿದರು.ನಿರ್ದೇಶಕ ಎಚ್. ರಾಮ ಭಟ್ ಪ್ರಾರ್ಥನೆ ಹಾಡಿದರು.