ತಿರುವನಂತಪುರ: ಅತ್ಯಾಚಾರ ಪ್ರಕರಣದ ಆರೋಪಿ ನಟ ಸಿದ್ದಿಕ್ ಅವರನ್ನು ತನಿಖಾ ತಂಡ ಸೋಮವಾರ ವಿಚಾರಣೆ ನಡೆಸಲಿದೆ. ವಿಚಾರಣೆಗೆ ಹಾಜರಾಗುವಂತೆ ತನಿಖಾ ತಂಡ ಸಿದ್ದಿಕ್‍ಗೆ ನೋಟಿಸ್ ಜಾರಿ ಮಾಡಿದೆ.
ವಿಚಾರಣೆಗಾಗಿ ಸೋಮವಾರ ತಿರುವನಂತಪುರಂ ತಲುಪುವಂತೆ ಸೂಚಿಸಲಾಗಿದೆ. ತಿರುವನಂತಪುರಂ ನಾರ್ಕೋಟಿಕ್ಸ್ ಸೆಲ್ ಎಸಿ ನೋಟಿಸ್ ಜಾರಿ ಮಾಡಿದೆ.
ಈ ಪ್ರಕರಣದಲ್ಲಿ ಈ ಹಿಂದೆ ಸುಪ್ರೀಂ ಕೋರ್ಟ್ ಸಿದ್ದಿಕ್‍ಗೆ ಮಧ್ಯಂತರ ಜಾಮೀನು ನೀಡಿತ್ತು. ವಿಚಾರಣೆಗೆ ಹಾಜರಾಗಲು ಸಿದ್ಧ ಎಂದು ಸಿದ್ದಿಕ್ ವಿಶೇಷ ತನಿಖಾ ತಂಡಕ್ಕೆ ಪತ್ರ ನೀಡಿದ್ದರು. ಮಧ್ಯಂತರ ಜಾಮೀನು ಪಡೆದರೂ ಪೆÇಲೀಸರು ನೋಟಿಸ್ ನೀಡದ ಪರಿಸ್ಥಿತಿಯಲ್ಲಿ ಪತ್ರ ನೀಡಲಾಗಿದೆ.
ಇದೇ ತಿಂಗಳ 22 ರಂದು ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮತ್ತೊಮ್ಮೆ ಪರಿಗಣಿಸಿದಾಗ, ಸಿದ್ದಿಕ್ ಪತ್ರದ ಬಗ್ಗೆ ತಿಳಿಸಲಿದ್ದಾರೆ.