ಕೊಚ್ಚಿ: ಬಣ್ಣದ ಬಟ್ಟೆಯ ಬದಲು ಸಮವಸ್ತ್ರ ಧರಿಸುವಂತೆ ಶಿಕ್ಷಕರ ಒತ್ತಾಯವನ್ನು ಮಗುವಿಗೆ ಮಾನಸಿಕ ಅಥವಾ ದೈಹಿಕವಾಗಿ ತೊಂದರೆ ಕೊಡುವ ಕೃತ್ಯ ಎಂದು ಪರಿಗಣಿಸಲಾಗದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಬಣ್ಣದ ಬಟ್ಟೆಯ ಬದಲು ಸಮವಸ್ತ್ರ ಧರಿಸುವಂತೆ ಒತ್ತಾಯಿಸಿ ತ್ರಿಶೂರ್ ಜಿಲ್ಲೆಯ ಶಾಲಾ ಪ್ರಾಂಶುಪಾಲರ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸುತ್ತಿದ್ದ ನ್ಯಾಯಮೂರ್ತಿ ಎ. ಬದ್ರುದ್ದೀನ್ ಈ ಆದೇಶ ನೀಡಿದ್ದಾರೆ. 2020 ರ ರಜೆಯಲ್ಲಿ ಬಣ್ಣದ ಬಟ್ಟೆಗಳನ್ನು ಧರಿಸಿ ಶಾಲೆಗೆ ಬಂದ 8 ನೇ ತರಗತಿಯ ವಿದ್ಯಾರ್ಥಿಗೆ ಸಮವಸ್ತ್ರ ಧರಿಸುವಂತೆ ಪ್ರಾಂಶುಪಾಲರು ಸೂಚಿಸಿದರು ಎಂಬುದು ಪ್ರಾಸಿಕ್ಯೂಷನ್ ಪ್ರಕರಣವಾಗಿತ್ತು. ಸಮವಸ್ತ್ರದ ಬದಲು ಬಣ್ಣದ ಬಟ್ಟೆ ಹಾಕಿಕೊಂಡು ಬಂದಿದ್ದೇಕೆ ಎಂದು ಪ್ರಾಂಶುಪಾಲರು ಪ್ರಶ್ನಿಸಿದಾಗ ಈ ಘಟನೆ ನಡೆದಿದೆ. ಬಳಿಕ ವಿದ್ಯಾರ್ಥಿಗೆ ಸಮವಸ್ತ್ರ ಬದಲಾಯಿಸಲು ಮನೆಗೆ ಕಳುಹಿಸಲಾಗಿತ್ತು. ಆದರೆ ರಜಾದಿನಗಳಲ್ಲಿ ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ನಿμÉೀಧಿಸಲಾಗಿಲ್ಲ ಎಂದು ವಿದ್ಯಾರ್ಥಿಯು ವಾದಿಸಿದ ನಂತರ ಪ್ರಾಂಶುಪಾಲರ ವಿರುದ್ಧ ಬಾಲನ್ಯಾಯ (ಜೆಜೆ) ಕಾಯ್ದೆಯ ಸೆಕ್ಷನ್ 75 ರ ಅಡಿಯಲ್ಲಿ ಕ್ರೌರ್ಯವನ್ನು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಶಾಲಾ ಶಿಸ್ತಿನ ಭಾಗವಾಗಿ ಸಮವಸ್ತ್ರವನ್ನು ಕಡ್ಡಾಯಗೊಳಿಸಿದರೆ, ಪರಿಣಾಮಕಾರಿ ಶಿಕ್ಷಣಕ್ಕೆ ಅಗತ್ಯವಾದ ಘನತೆ ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಒತ್ತಾಯಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಜೆಜೆ ಕಾಯಿದೆಯ ಸೆಕ್ಷನ್ 75 ರ ಅಡಿಯಲ್ಲಿ ಅಂತಹ ಕೃತ್ಯಗಳನ್ನು ಅಪರಾಧವೆಂದು ಪರಿಗಣಿಸಿದರೆ, ಶಾಲೆಯ ಶಿಸ್ತಿಗೆ ತೊಂದರೆಯಾಗುತ್ತದೆ ಮತ್ತು ಸುವ್ಯವಸ್ಥೆ ಕಾಪಾಡುವ ಸಂಸ್ಥೆಯ ಸಾಮಥ್ರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಹೇಳಿದೆ.