ತಿರುವನಂತಪುರಂ: ಈ ಹಿಂದೆಯೂ ಶ್ರೀಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ದೇಗುಲದ ವಸ್ತುಗಳು ನಾಪತ್ತೆಯಾಗಿದ್ದನ್ನು ದೇವಸ್ಥಾನದ ಮಾಜಿ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಬೆಳ್ಳಿಯ ಸರ, ಬೆಳ್ಳಿಯ ಕಮಂಡಲಗಳು, ರುದ್ರಾಕ್ಷ ಮಾಲೆ ಕಳೆದು ಹೋಗಿವೆ. ಎರಡು ದಿನಗಳ ನಂತರ ಇವುಗಳನ್ನು ಹಿಂತಿರುಗಿಸಲಾಗಿತ್ತು ಎಂದು ದೇವಸ್ಥಾನದ ಮಾಜಿ ಅಧಿಕಾರಿ ಹಾಗೂ ಕರ್ಮಚಾರಿ ಸಂಗಮದ ಅಧ್ಯಕ್ಷ ಬಬಿಲು ಶಂಕರ್ ತಿಳಿಸಿದ್ದಾರೆ.
ವಸ್ತುಗಳು ನಾಪತ್ತೆಯಾಗುವುದು ಮತ್ತು ವಸ್ತುಗಳನ್ನು ತನಿಖೆ ಮಾಡದೆ ಹಿಂತಿರುಗಿಸುವುದು ಅಸಾಮಾನ್ಯ ಎಂದು ಬಬಿಲು ಶಂಕರ್ ಗಮನಸೆಳೆದಿದ್ದಾರೆ. ಶ್ರೀಪದ್ಮನಾಭ ಸ್ವಾಮಿ ದೇವಸ್ಥಾನದಂತಹ ಭದ್ರತಾ ವ್ಯವಸ್ಥೆ ಇರುವ ಜಾಗದಲ್ಲಿ ಇಂತಹದೆಲ್ಲ ನಡೆಯುತ್ತಿರುವುದು ಅಚ್ಚರಿ ಎಂದವರು ಪ್ರತಿಕ್ರಿಯಿಸಿದ್ದಾರೆ.
ಆಡಳಿತ ಮಂಡಳಿಯ ಸದಸ್ಯರೂ ತನಿಖೆಗೆ ಆಸಕ್ತಿ ತೋರಿಸಿಲ್ಲ. ಈ ಸಂಬಂಧ ಬಬಿಲು ಶಂಕರ್ ಎಂಬುವರು ದಾಖಲಿಸಿರುವ ಪ್ರಕರಣ ಇದೀಗ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಬಬಿಲು ಶಂಕರ್ ಅವರ ಪ್ರತಿಕ್ರಿಯೆ ದೇವಸ್ಥಾನಅವ್ಯವಸ್ಥೆಗಳ ಸಂದರ್ಭ ಗಮನಾರ್ಹವಾಗಿದೆ.
ದೇವಸ್ಥಾನದಿಂದ ನಾಪತ್ತೆಯಾಗಿರುವ ವಸ್ತುಗಳ ಬಗ್ಗೆ ವಿಸ್ತೃತ ತನಿಖೆ ನಡೆಸುವಂತೆ ಬಬಿಲು ಶಂಕರ್ ಆಗ್ರಹಿಸಿದ್ದಾರೆ. ಕಳೆದುಹೋದ ನಂತರ ಹಿಂದಿರುಗಿದ ವಸ್ತುಗಳು ನಕಲಿ ಅಲ್ಲ ಎಂದು ಖಚಿತಪಡಿಸಿಕೊಳ್ಳಬೇಕು ಎಂದವರು ಬೊಟ್ಟುಮಾಡಿರುವರು.